ಸಚಿವ ಸೋಮಣ್ಣ, ಶಾಸಕ ಎನ್.ಮಹೇಶ್ ಆಸ್ತಿ ವಿವರ - Mahanayaka

ಸಚಿವ ಸೋಮಣ್ಣ, ಶಾಸಕ ಎನ್.ಮಹೇಶ್ ಆಸ್ತಿ ವಿವರ

n mahesh somanna
19/04/2023


Provided by

ಚಾಮರಾಜನಗರ: ಸಚಿವ ಸೋಮಣ್ಣ ವರುಣಾ ಬಳಿಕ ಇಂದು ಚಾಮರಾಜನಗರದಲ್ಲಿ ತಮ್ಮ ಉಮೇದುವಾರಿಕೆ ಸಲ್ಲಿಸಿದ್ದು ಆಸ್ತಿ ವಿವರಗಳನ್ನು ಘೋಷಣೆ ಮಾಡಿಕೊಂಡಿದ್ದಾರೆ.

ಚರಾಸ್ಥಿ ವಿಚಾರ ಗಮನಿಸಿದರೇ ಸೋಮಣ್ಣಗಿಂತ ಪತ್ನಿ ಶೈಲಾಜ ಶ್ರೀಮಂತರಾಗಿದ್ದು ಸೋಮಣ್ಣ ಬಳಿ ಚರಾಸ್ಥಿ 3.61 ಕೋಟಿ ಅಷ್ಟಿದ್ದರೇ ಪತ್ನಿ ಶೈಲಜಾ ಬಳಿ ಚರಾಸ್ಥಿ 13.01 ಕೋಟಿ ಮೌಲ್ಯದ ಆಸ್ತಿ ಹೊಂದಿದ್ದಾರೆ‌‌‌. ಪತಿಗಿಂತ ಶೈಲಾಜ ಶ್ರೀಮಂತರಾದರೂ ಯಾವುದೇ ವಾಹನ ಹೊಂದಿಲ್ಲ ಆದರೆ ಸೋಮಣ್ಣ 3 ಕಾರುಗಳ ಮಾಲೀಕರಾಗಿದ್ದಾರೆ.

ಸೋಮಣ್ಣ ಅವರು ಕೈಯಲ್ಲಿ 4.1 ಲಕ್ಷ ಇದ್ದರೇ ಪತ್ನಿ ಬಳಿ 9.99 ಲಕ್ಷ ಹಣ ನಗದನ್ನು ಇಟ್ಟುಕೊಂಡಿದ್ದಾರೆ. ಇನ್ನು, ಪತಿ- ಪತ್ನಿ ಇಬ್ಬರೂ ಸಾಲಗಳನ್ನು ಹೊಂದಿದ್ದು ಸೋಮಣ್ಣಗೆ 2.9 ಕೋಟಿ ಸಾಲ ಇದ್ದರೇ ಪತ್ನಿ ಶೈಲಜಾ ಅವರಿಗೆ 4.5 ಕೋಟೆ ಸಾಲ ಇದೆ. ಇನ್ನೂ ಪತ್ನಿ ಶೈಲಜಾ ಅವರಿಂದಲೇ ಸೋಮಣ್ಣ 20 ಲಕ್ಷ ಸಾಲ ಪಡೆದಿದ್ದಾರೆ. ಸ್ಥಿರಾಸ್ಥಿಗಳು ಸೋಮಣ್ಣ ಬಳಿ 10 ಕೋಟಿ ಮೌಲ್ಯ ಹೊಂದಿದ್ದರೇ, ಪತ್ನಿ ಬಳಿ 21 ಕೋಟಿಯಷ್ಟು ಆಸ್ತಿ ಹೊಂದಿದ್ದಾರೆ. ಇಬ್ಬರದೂ ಸ್ವಯಾರ್ಜಿತ ಆಸ್ತಿಯಾಗಿದ್ದು ಪಿತ್ರಾರ್ಜಿತವಾಗಿ ಯಾವೂದು ಬಂದಿಲ್ಲ.

ಬೃಹತ್ ಮೆರವಣಿಗೆ: ಸಚಿವ ಸೋಮಣ್ಣ ಡಾ‌.ಬಿ.ಆರ್.ಅಂಬೇಡ್ಕರ್ ಭವನದಿಂದ ತಾಲೂಕು ಕಚೇರಿವರೆಗೆ ಬೃಹತ್‌ ಮೆರವಣಿಗೆ ನಡೆಸಿ ನಾಮಪತ್ರ ಸಲ್ಲಿಸಿದರು. ನಾಮಪತ್ರ ಸಲ್ಲಿಕೆ ವೇಳೆ ಸಂಸದ ಪ್ರತಾಪ್ ಸಿಂಹ, ಎಂಎಲ್ ಸಿ ನಾರಾಯಣಸ್ವಾಮಿ ಸಾಥ್ ಕೊಟ್ಟರು.

ವಾಟಾಳ್ ಪಂಚಕೋಟ್ಯಾಧೀಶ:
ನಿನ್ನೆ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಉಮೇದುವಾರಿಕೆ ಸಲ್ಲಿಸಿದ್ದು 5.3 ಕೋಟಿ ಆಸ್ತಿ ಘೋಷಣೆ ಮಾಡಿಕೊಂಡಿದ್ದಾರೆ.

ಚಿನ್ನಾಭರಣ ಹಾಗೂ ಸಾಲ ತಮಗಿಲ್ಲ ಎಂದು ವಾಟಾಳ್ ತಿಳಿಸಿದ್ದು ಕೈಯಲ್ಲಿ 50 ಸಾವಿರ ನಗದಿದೆ ಎಂದು ಮಾಹಿತಿ ಕೊಟ್ಟಿದ್ದಾರೆ. ಬಹುತೇಕ ಆಸ್ತಿ ಪತ್ನಿ ಅವರಿಂದ ಬಂದದ್ದಾಗಿದೆ ಎಂದು ತಿಳಿಸಿದ್ದಾರೆ‌.

ಶಾಸಕ ಎನ್.ಮಹೇಶ್ ಗೆ ಸ್ಥಿರಾಸ್ತಿಯೇ ಇಲ್ಲಾ:

ಇನ್ನು, ಶಾಸಕ ಎನ್.ಮಹೇಶ್ ಅವರು ಕೂಡ ಕೊಳ್ಳೇಗಾಲದಲ್ಲಿ ನಾಮಪತ್ರ ಸಲ್ಲಿಸಿದ್ದು ಆಸ್ತಿ ವಿವರವನ್ನು ಘೋಷಣೆ ಮಾಡಿಕೊಂಡಿದ್ದು ತಮ್ಮ ಹೆಸರಲ್ಲಿ ಯಾವುದೇ ಸ್ಥಿರಾಸ್ತಿಗಳಿಲ್ಲ ಎಂದು ತಿಳಿಸಿದ್ದಾರೆ.

ಇನ್ನು, ಚರಾಸ್ತಿಗಳು ಮಾತ್ರ ತಮ್ಮಲ್ಲಿ ಇದ್ದು ಅವುಗಳ ಮೌಲ್ಯ ಒಟ್ಟು 1.83 ಕೋಟಿ ತಿಳಿಸಿದ್ದಾರೆ. ಇದರಲ್ಲಿ 1 ಕಾರು, 150 ಗ್ರಾಂ ಚಿನ್ನ ಮತ್ತು ಚಿಗುವೆರಾ ಎಂಬವರಿಗೆ 50 ಲಕ್ಷ ಸಾಲ ಕೊಟ್ಟಿರುವುದು ಸೇರಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD

ಯೂಟ್ಯೂಬ್ ಚಾನೆಲ್ ಸಬ್ಸ್ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ