ವಿದ್ಯುತ್ ಬಿಲ್ ಹೆಚ್ಚಳ ಎಫೆಕ್ಟ್: ನೀರಿನ ದರ ಹೆಚ್ಚಳಕ್ಕೆ ಸರ್ಕಾರಕ್ಕೆ ಪ್ರಸ್ತಾವನೆ
ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ವಿದ್ಯುತ್ ಬಿಲ್ ಹೆಚ್ಚಳದ ನಂತರ ನೀರಿನ ದರವನ್ನು ಹೆಚ್ಚಿಸುವ ಪ್ರಸ್ತಾವನೆಯನ್ನು ಸರ್ಕಾರದ ಮುಂದಿಡಲು ಮುಂದಾಗಿದೆ.
BWSSB ತೊರೆಕಾಡನಹಳ್ಳಿ, ಹಾರೋಹಳ್ಳಿ, ಟಿ.ಕೆ. ಹಳ್ಳಿ ಮತ್ತು ತಾತುಗುಣಿಯಲ್ಲಿನ ಪಂಪಿಂಗ್ ಸ್ಟೇಷನ್ ಗಳ ಮೂಲಕ ನಗರಕ್ಕೆ ನೀರನ್ನು ಪೂರೈಸುತ್ತಿದೆ. ನೀರನ್ನು ಪಂಪ್ ಮಾಡಲು ಮತ್ತು ಮನೆಗಳಿಗೆ ಸರಬರಾಜು ಮಾಡಲು, BWSSB ವಿದ್ಯುತ್ ಅನ್ನು ಬಳಸುತ್ತದೆ. ಪಂಪಿಂಗ್ ಸ್ಟೇಷನ್ ಗಳು, ಉಪ ವಿಭಾಗಗಳು ಹಾಗೂ ಪ್ರಧಾನ ಕಚೇರಿ ಸೇರಿದಂತೆ ಇತರೆ ಕಚೇರಿಗಳಲ್ಲಿ ಬಳಸಿದ ವಿದ್ಯುತ್ ಗೆ ಮಾಸಿಕ 80 ಕೋಟಿ ರೂ. ಶುಲ್ಕ ಪಾವತಿ ಮಾಡಲಾಗುತ್ತಿತ್ತು.
ಆದ್ರೆ ಈಗ ವಿದ್ಯುತ್ ಶುಲ್ಕ ಏರಿಕೆಯಾಗಿರುವುದರಿಂದ ಜಲಮಂಡಳಿಯು ತಿಂಗಳಿಗೆ ಹೆಚ್ಚುವರಿಯಾಗಿ 10-12 ಕೋಟಿ ರೂ. ಹೆಚ್ಚುವರಿ ಬಿಲ್ ಕಟ್ಟುವಂತಾಗಿದೆ. ವಿದ್ಯುತ್ ದರಗಳ ಹೆಚ್ಚಳದಿಂದಾಗಿ, BWSSB ಹಣಕಾಸು ನಿರ್ವಾಹಣೆ ಕಷ್ಟವಾಗಿದೆ. ಹೀಗಾಗಿ ನೀರಿನ ದರವನ್ನು ಹೆಚ್ಚಿಸಲು ವಿನಂತಿಸಿ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಕಳುಹಿಸಲು ಚಿಂತನೆ ನಡೆಸಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/D73015iu7jn2glm2MECosd
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw




























