ಹಿಂಸಾತ್ಮಕವಾಗಿ ಸಾಗಿಸುತ್ತಿದ್ದ ಜಾನುವಾರುಗಳ ರಕ್ಷಣೆ: ಇಬ್ಬರು ಆರೋಪಿಗಳ ಬಂಧನ - Mahanayaka

ಹಿಂಸಾತ್ಮಕವಾಗಿ ಸಾಗಿಸುತ್ತಿದ್ದ ಜಾನುವಾರುಗಳ ರಕ್ಷಣೆ: ಇಬ್ಬರು ಆರೋಪಿಗಳ ಬಂಧನ

udupi
24/06/2023

ಕುಂದಾಪುರ: ಮೂರು ಜಾನುವಾರುಗಳನ್ನು ಗೂಡ್ಸ್ ವಾಹನದಲ್ಲಿ ಹಿಂಸಾತ್ಮಕವಾಗಿ ಸಾಗಿಸುತ್ತಿದ್ದ ವೇಳೆ  ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ, ಜಾನುವಾರುಗಳನ್ನು ರಕ್ಷಿಸಿದ ಘಟನೆ ಕುಂದಾಪುರ  ತಾಲೂಕಿನ ಹಾಲಾಡಿ ಗ್ರಾಮದ ಕುದ್ರುಬೆಟ್ಟು  ಎಂಬಲ್ಲಿ ಜೂ.24 ಶನಿವಾರ ನಡೆದಿದೆ.


Provided by

ಕುಂದಾಪುರ ಜಪ್ತಿ ಕರಿಕಲ್ಕಟ್ಟೆಯ ಚಂದ್ರಶೆಟ್ಟಿ (55), ಹಳ್ಳಾಡಿ ಗುಡ್ಡೆಯಂಗಡಿ ನಿವಾಸಿ ಅಣ್ಣಪ್ಪ (65) ಬಂಧಿತ ಆರೋಪಿಗಳು.

ಆರೋಪಿಗಳು ಗೂಡ್ಸ್ ವಾಹನದಲ್ಲಿ ಯಾವುದೇ ಪರವಾನಿಗೆಯಿರದ ಮೂರು ಗಂಡು ಕರುಗಳನ್ನು  ಮೇವು  ಬಾಯಾರಿಕೆ ನೀಡದೇ, ಹಿಂಸಾತ್ಮಕವಾಗಿ   ತುಂಬಿಸಿ ವಧೆ ಮಾಡಲು ಕುದ್ರುಬೆಟ್ಟು ಎಂಬಲ್ಲಿ ಕುಚ್ಚಾಳ  ಕಡೆಯಿಂದ ಕುಂದಾಪುರ ಕಡೆಗೆ ಸಾಗಾಟ ಮಾಡುತ್ತಿದ್ದಾಗ ಸಿಕ್ಕ ಖಚಿತ ವರ್ತಮಾನದಂತೆ ಶಂಕರನಾರಾಯಣ ಪಿಎಸ್ ಐ ನಾಸೀರ್ ಹಾಗೂ ಸಿಬ್ಬಂದಿಗಳ ತಂಡ ಈ ಕಾರ್ಯಾಚರಣೆ ನಡೆಸಿದ್ದಾರೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR

ಯೂಟ್ಯೂಬ್ ಚಾನೆಲ್ ಸಬ್ಸ್ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ