ಕಾವೇರಿ ನೀರಿಗಾಗಿ ರೈತರ ಪ್ರತಿಭಟನೆ: ಇಂದು ಬೆಂಗಳೂರು—ಮೈಸೂರು ಎಕ್ಸ್ ಪ್ರೆಸ್ ವೇ ತಡೆದು ಪ್ರತಿಭಟನೆ - Mahanayaka

ಕಾವೇರಿ ನೀರಿಗಾಗಿ ರೈತರ ಪ್ರತಿಭಟನೆ: ಇಂದು ಬೆಂಗಳೂರು—ಮೈಸೂರು ಎಕ್ಸ್ ಪ್ರೆಸ್ ವೇ ತಡೆದು ಪ್ರತಿಭಟನೆ

k r s
22/08/2023

ಮಂಡ್ಯ: ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ  ಕೆಆರ್ ಎಸ್ ಡ್ಯಾಮ್ ನಿಂದ ತಮಿಳುನಾಡಿಗೆ ನೀರು ಹರಿಸುವುದನ್ನು ಖಂಡಿಸಿ ಎಂದು ರೈತ ಸಂಘಗಳು ಬೆಂಗಳೂರು—ಮೈಸೂರು ಎಕ್ಸ್ ಪ್ರೆಸ್ ವೇ ತಡೆದು ಪ್ರತಿಭಟನೆ ನಡೆಸಲಿದೆ.

ಕಾವೇರಿ ಜಲನಯನ ಪ್ರದೇಶದಲ್ಲಿ ನಿರೀಕ್ಷಿತ ಮಟ್ಟದಲ್ಲಿ ಮಳೆಯಾಗಿಲ್ಲ,  ಹೀಗಾಗಿ ಹಳೆ ಮೈಸೂರು ಭಾಗದ ಜೀವನಾಡಿ ಕೆಆರ್ ಎಸ್ ಇನ್ನೂ ಭರ್ತಿಯಾಗಿಲ್ಲ, ಈ ನಡುವೆ ತಮಿಳುನಾಡಿಗೆ ನೀರು ಹರಿಸಲಾಗುತ್ತಿದೆ. ಇದನ್ನು ಖಂಡಿಸಿ ಸೋಮವಾರವೂ ಪ್ರತಿಭಟನೆ ನಡೆದಿತ್ತು.

ಇಂದು ರೈತ ಸಂಘಟನೆಗಳ ಪ್ರತಿಭಟನೆ ತೀವ್ರ ಸ್ವರೂಪದಲ್ಲಿರಲಿದ್ದು, ಮಂಡ್ಯದ ಇಂಡವಾಳು ಸಮೀಪದ ಬೆಂಗಳೂರು—ಮೈಸೂರು ಎಕ್ಸ್ ಪ್ರೆಸ್ ವೇನಲ್ಲಿ ಎತ್ತಿನ ಗಾಡಿ, ಜಾನುವಾರು, ಟ್ರ್ಯಾಕ್ಟರ್ ತಂದು ಹೆದ್ದಾರಿ ತಡೆದು ಪ್ರತಿಭಟನೆ ನಡೆಸಲಿದೆ ಎಂದು ತಿಳಿದು ಬಂದಿದೆ.

ಇತ್ತೀಚಿನ ಸುದ್ದಿ