ಗೌತಮ್ ಅದಾನಿ ಬಂಧನಕ್ಕೆ ಒತ್ತಾಯಿಸಿ ಟಿಎಂಸಿ ಸಂಸದರಿಂದ ಪ್ರತಿಭಟನೆ

ನವದೆಹಲಿ: ಉದ್ಯಮಿ ಗೌತಮ್ ಅದಾನಿ ಅವರನ್ನು ಬಂಧಿಸುವಂತೆ ಒತ್ತಾಯಿಸಿ ಟಿಎಂಸಿ ಸಂಸದರ ನಿಯೋಗ ಗುರುವಾರ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಕಚೇರಿ ಮುಂದೆ ಪ್ರತಿಭಟನೆ ನಡೆಸಿತು.
ಟಿಎಂಸಿ ಲೋಕಸಭಾ ಸಂಸದರಾದ ಪ್ರತಿಮಾ ಮಂಡಲ್, ಅಬು ತಾಹೆರ್ ಖಾನ್, ಖಲೀಲುರ್ ರೆಹಮಾನ್, ಸುನಿಲ್ ಮಂಡಲ್ ಮತ್ತು ರಾಜ್ಯಸಭಾ ಸದಸ್ಯರಾದ ಸಂತಾನು ಸೇನ್, ಅಬೀರ್ ಬಿಸ್ವಾಸ್, ಮೌಸಮ್ ನೂರ್ ಹಾಗೂ ಸುಸ್ಮಿತಾ ದೇವ್ ಮೊದಲಾದವರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.
ಸಾಂಕೇತಿಕ ಪ್ರತಿಭಟನೆಯ ಭಾಗವಾಗಿ ಅದಾನಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ಚಿತ್ರಗಳನ್ನು ಮುದ್ರಿಸಿದ ಎರಡು ಕ್ಯಾಪ್ ಗಳನ್ನು ಸೀತಾರಾಮನ್ ಅವರ ಕಚೇರಿಗೆ ನೀಡಲಾಯಿತು.
ಇನ್ನೂ ಗೌತಮ್ ಅದಾನಿ ವಿರುದ್ಧ ಟಿಎಂಸಿ ಸಂಸದರ ಮತ್ತೊಂದು ಗುಂಪು ಜಾರಿ ನಿರ್ದೇಶನಾಲಯಕ್ಕೆ ಪಾದಯಾತ್ರೆ ನಡೆಸಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw