ಪಿಎಸ್ ಐ ಹಗರಣದಲ್ಲಿ ಗೃಹ ಸಚಿವರೇ ಶಾಮೀಲು: ಪ್ರಿಯಾಂಕ್ ಖರ್ಗೆ - Mahanayaka

ಪಿಎಸ್ ಐ ಹಗರಣದಲ್ಲಿ ಗೃಹ ಸಚಿವರೇ ಶಾಮೀಲು: ಪ್ರಿಯಾಂಕ್ ಖರ್ಗೆ

priyank kharge
26/04/2022


Provided by

ಬೆಂಗಳೂರು: 545 ಪಿಎಸ್ ಐ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯಲ್ಲಿ ಅಕ್ರಮ ನಡೆಸಿರುವ ವಿಚಾರಕ್ಕೆ ಸಂಬಂಧಿಸಿದಂತೆ ಹಲವು ಗಂಭೀರ ಆರೋಪಗಳನ್ನು ಮಾಡಿದ್ದ ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಸಿಐಡಿ ವಿಚಾರಣೆಗೆ ಗೈರು ಹಾಜರಾಗಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಿಯಾಂಕ್ ಖರ್ಗೆ  ಆಡಿಯೋ ಬಿಡುಗಡೆ ಮಾಡಿದ್ದರು. ಈ ಆಡಿಯೋ ಸಂಬಂಧ ಪ್ರಕರಣದಲ್ಲಿ ಸಾಕ್ಷಿ ನುಡಿಯುವಂತೆ ಸಿಐಡಿ  ಅಧಿಕಾರಿಗಳು ಪ್ರಿಯಾಂಕ ಖರ್ಗೆ ಅವರಿಗೆ ನೊಟೀಸ್ ನೀಡಿತ್ತು.

ಸೋಮವಾರ ಬೆಳಗ್ಗೆ  11:30ಕ್ಕೆ ವಿಚಾರಣೆಗೆ ಸಮಯ ನೀಡಲಾಗಿತ್ತು. ಆದರೆ ಪ್ರಿಯಾಂಕ್ ಖರ್ಗೆ ಸಿಐಡಿ ವಿಚಾರಣೆಗೆ ಗೈರಾಗಿದ್ದರು.

ಸಿಐಡಿ ನೋಟಿಸ್ ಗೆ ಸಂಬಂಧಿಸಿದಂತೆ ಗರಂ ಆಗಿದ್ದ ಪ್ರಿಯಾಂಕ್ ಖರ್ಗೆ, ಇದು ಸರ್ಕಾರದ ಅಸಮರ್ಥತೆ ಎಂದು ವ್ಯಾಖ್ಯಾನಿಸಿದ್ದರು.  ಈ ಪ್ರಕರಣದ ಪ್ರಮುಖ ಆರೋಪಿ ದಿವ್ಯಾ ಹಾಗರಗಿ ಅವರ ಮನೆಗೆ ಗೃಹ ಸಚಿವ ಅರಗ ಜ್ಞಾನೇಂದ್ರ ಭೇಟಿ ನೀಡಿದ್ದರು. ಹೀಗಾಗಿ ಮೊದಲು ಗೃಹ ಸಚಿವರನ್ನು ತನಿಖೆ ಮಾಡಬೇಕು ಎಂದು  ಪ್ರಿಯಾಂಕ್ ಖರ್ಗೆ ಆಗ್ರಹಿಸಿದ್ದರು.

ಇನ್ನೂ ಸಿಐಡಿ ತನಿಖೆಗೆ ಹಾಜರಾಗ್ ಹಿನ್ನೆಲೆಯಲ್ಲಿ, ಕಾಂಗ್ರೆಸ್‌ ಶಾಸಕ ಪ್ರಿಯಾಂಕ್‌ ಖರ್ಗೆ ಅವರು ಸಿಐಡಿ ಅಧಿಕಾರಿಗಳ ಮುಂದೆ ಹಾಜರಾಗಿ ತನಿಖೆಗೆ ಸಹಕರಿಸುವುದರ ಬದಲು ಪಲಾಯನವಾದ ನೀತಿ ಅನುಸರಿಸಿದ್ದಾರೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಲೇವಡಿ ಮಾಡಿದ್ದಾರೆ.

ಸಿಐಡಿ ಅಧಿಕಾರಿಗಳ ಮುಂದೆ ಹಾಜರಾಗಿ ಸಾಕ್ಷ್ಯಾಧಾರಗಳನ್ನು ನೀಡದೆ ಇರುವ ನಿರ್ಧಾರದ ಹಿಂದೆ ಬಂಧನಕ್ಕೆ ಒಳಗಾಗಿರುವ ತಮ್ಮ ಆಪ್ತರನ್ನು ರಕ್ಷಿಸುವ ಉದ್ದೇಶ ಇದೆ ಎನ್ನುವಂತಾಗಿದೆ ಎಂದು ಅವರು ಹೇಳಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1duNIQRfXnJcfQKWPzNqD

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಜಾದೂವೇಳೆ ಆಕಸ್ಮಿಕವಾಗಿ ಬ್ಲೇಡ್ ಗಳ ಮಾಲೆ ನುಂಗಿದ ಮಾಂತ್ರಿಕ!

ಫ್ರಾನ್ಸ್ ಅಧ್ಯಕ್ಷರಾಗಿ ಪುನರಾಯ್ಕೆಯಾದ  ಇಮ್ಯಾನುಯೆಲ್ ಮ್ಯಾಕ್ರೋನ್

ಕಾರಿನ ಸೈಲೆನ್ಸರ್ ನಲ್ಲಿ ಕಾಣಿಸಿಕೊಂಡ ಹೊಗೆ: ಕಾರಿನಿಂದ ಇಳಿದರೂ ಹೋಯ್ತು ಪ್ರಾಣ!

ಮಾಸ್ಕ್  ಕಡ್ಡಾಯಗೊಳಿಸಿದ ಸರ್ಕಾರ:  ಮಾಸ್ಕ್ ಧರಿಸದಿದ್ರೆ ದಂಡ ಹಾಕ್ತಾರಾ?

ಬುಲ್ಡೋಜರ್ ನಿಂದ ಎಟಿಎಂ ಧ್ವಂಸಗೊಳಿಸಿ ಹಣದೋಚಿದ ಕಳ್ಳರು:  ಕಳ್ಳರಿಗೆ ಮಾದರಿಯಾಯ್ತೆ ಬುಲ್ಡೋಜರ್ ಕಾರ್ಯಾಚರಣೆ!

ಇತ್ತೀಚಿನ ಸುದ್ದಿ