ಪಬ್ ಜಿ ಆಟದ ವಿಚಾರದಲ್ಲಿ ಜಗಳ? | 13 ವರ್ಷ ವಯಸ್ಸಿನ ಬಾಲಕನ ಹತ್ಯೆ - Mahanayaka
6:54 PM Saturday 18 - October 2025

ಪಬ್ ಜಿ ಆಟದ ವಿಚಾರದಲ್ಲಿ ಜಗಳ? | 13 ವರ್ಷ ವಯಸ್ಸಿನ ಬಾಲಕನ ಹತ್ಯೆ

hakeeb
04/04/2021

ಉಳ್ಳಾಲ: ನಾಪತ್ತೆಯಾಗಿದ್ದ ಬಾಲಕನೋರ್ವನ ಮೃತದೇಹ ಭಾನುವಾರ ಮುಂಜಾನೆ ಕೊಲೆ ಮಾಡಲಾಗಿರುವ ಸ್ಥಿತಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಕೆ.ಸಿ.ರೋಡ್ ಎಂಬಲ್ಲಿ ಪತ್ತೆಯಾಗಿದೆ.


Provided by

13 ವರ್ಷ ವಯಸ್ಸಿನ ಹಕೀಬ್ ಹತ್ಯೆಗೀಡಾಗಿರುವ ಬಾಲಕನಾಗಿದ್ದು, ತನ್ನ ಮನೆಯಿಂದ 3 ಕಿ.ಮೀ. ದೂರದಲ್ಲಿಯೇ ಬಾಲಕನ ಮೃತದೇಹ ಪತ್ತೆಯಾಗಿದೆ. ಏಪ್ರಿಲ್ 3ರ ಶನಿವಾರ ಸಂಜೆ ಹಕೀಬ್ ನಾಪತ್ತೆಯಾಗಿದ್ದ. ರಾತ್ರಿವರೆಗೆ ಮನೆಗೆ ಬಾರದೇ ಇದ್ದಾಗ ಮನೆಯವರು ಪೊಲೀಸರಿಗೆ ದೂರು ನೀಡಿದ್ದರು. ಆದರೆ ಭಾನುವಾರ ಮುಂಜಾನೆ ಬಾಲಕನ ಮೃತದೇಹ ಪತ್ತೆಯಾಗಿದೆ.

ಹಕೀಬ್ ಪಬ್ ಜಿ ಆಟದ ವಿಚಾರವಾಗಿ ತನ್ನ ಸ್ನೇಹಿತರೊಂದಿಗೆ ಜಗಳವಾಡಿದ್ದ ಎಂದು ಹೇಳಲಾಗುತ್ತಿದೆ ಎಂದು ಸ್ಥಳೀಯ ಮಾಧ್ಯಮವೊಂದು ವರದಿ ಮಾಡಿದೆ. ಘಟನೆ ಸಂಬಂಧ ಪ್ರಕರಣ ದಾಖಲಿಸಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಇತ್ತೀಚಿನ ಸುದ್ದಿ