ಪುನೀತ್ ಓದಿಸುತ್ತಿದ್ದ 1,800  ಮಕ್ಕಳ ವಿದ್ಯಾಭ್ಯಾಸದ ಹೊಣೆ ನನ್ನದು ಎಂದ ತಮಿಳು ನಟ ವಿಶಾಲ್ - Mahanayaka

ಪುನೀತ್ ಓದಿಸುತ್ತಿದ್ದ 1,800  ಮಕ್ಕಳ ವಿದ್ಯಾಭ್ಯಾಸದ ಹೊಣೆ ನನ್ನದು ಎಂದ ತಮಿಳು ನಟ ವಿಶಾಲ್

vishal
01/11/2021

ಬೆಂಗಳೂರು:  ಪುನೀತ್ ರಾಜ್ ಕುಮಾರ್ ಓದಿಸುತ್ತಿದ್ದ ಮಕ್ಕಳ ವಿದ್ಯಾಭ್ಯಾಸದ ಹೊಣೆಯನ್ನು ನಾನು ಹೊರುತ್ತೇನೆ ಎಂದು ತಮಿಳು ನಟ ವಿಶಾಲ್ ಅಕ್ಟೋಬರ್ 31ರಂದು ಘೋಷಿಸಿದ್ದು, ಮುಂದಿನ ವರ್ಷದಿಂದ 1,800 ಮಕ್ಕಳ ಜವಾಬ್ದಾರಿ ನನ್ನದು ಎಂದು ಅವರು ಹೇಳಿದ್ದಾರೆ.


Provided by

ಭಾನುವಾರ ರಾತ್ರಿ  ನಡೆದ ಶ್ರದ್ಧಾಂಜಲಿ  ಕಾರ್ಯಕ್ರಮದಲ್ಲಿ ಬೆಂಗಳೂರು ಮೂಲದ ತಮಿಳು ಖ್ಯಾತ ನಟ ವಿಶಾಲ್, ನಟ ಪುನೀತ್ ರಾಜ್ ಕುಮಾರ್ ಅವರು ಹೊತ್ತಿದ್ದ ಹೊಣೆಯನ್ನು ನಾನು ಹೊರುತ್ತೇನೆ ಎಂದು ಹೇಳಿದ್ದು, 1800 ಮಕ್ಕಳ ವಿದ್ಯಾಭ್ಯಾಸದ ಹೊಣೆ ನನ್ನದು ಎಂದು ಹೇಳಿದ್ದಾರೆ.

ವಿಶಾಲ್ ಅವರ ಮಾತಿಗೆ ಕನ್ನಡಿಗರು ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಶ್ರದ್ಧಾಂಜಲಿ ಸಭೆಯಲ್ಲಿ ಪುನೀತ್ ಅವರ ಸಾಮಾಜಿಕ ಕಾರ್ಯಗಳ ಬಗ್ಗೆ ಮಾತನಾಡುತ್ತಾ, ಬೇರೇನೂ ಯೋಚನೆ ಮಾಡದೇ, ಅವರು ಮಾಡುತ್ತಿದ್ದ ಕೆಲಸಗಳಲ್ಲಿ ಒಂದು ಕೆಲಸವನ್ನು ತಾನು ಹೊರುವುದಾಗಿ ಹೇಳಿದ್ದಾರೆ. ಇನ್ನಷ್ಟು ನಟರು ಪುನೀತ್ ರಾಜ್ ಕುಮಾರ್ ದಾರಿಯಲ್ಲಿ ಸಾಗಲಿ ಎಂದು ನೆಟ್ಟಿಗರು ಹಾರೈಸಿದ್ದಾರೆ. ಜೊತೆಗೆ ನಟ ವಿಶಾಲ್ ಅವರ ಪ್ರೀತಿಗೆ ಮೆಚ್ಚುಗೆ  ವ್ಯಕ್ತಪಡಿಸಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DvHWsFS1hwLKfIX9njyNyb

ಇತ್ತೀಚಿನ ಸುದ್ದಿ