ಪುನೀತ್ ಬರಬೇಕಿತ್ತಂತೆ ಈ ದೇಗುಲಕ್ಕೆ: ಮನೆದೇವರ ದರ್ಶನ ಪಡೆದ ಅಶ್ವಿನಿ, ರಾಘಣ್ಣ ಹಾಗೂ ಮಕ್ಕಳು - Mahanayaka
10:01 AM Tuesday 30 - December 2025

ಪುನೀತ್ ಬರಬೇಕಿತ್ತಂತೆ ಈ ದೇಗುಲಕ್ಕೆ: ಮನೆದೇವರ ದರ್ಶನ ಪಡೆದ ಅಶ್ವಿನಿ, ರಾಘಣ್ಣ ಹಾಗೂ ಮಕ್ಕಳು

chikkatirupati
28/12/2022

ಚಾಮರಾಜನಗರ: ಚಿಕ್ಕ ತಿರುಪತಿ ಎಂಥಲೇ ಕರೆಯುವ ಹನೂರು ತಾಲೂಕಿನ ಸಿಂಗಾನಲ್ಲೂರು ಸಮೀಪದ ಬೂದುಬಾಳು ಗ್ರಾಮದ ವೆಂಕಟರಮಣಸ್ವಾಮಿ ದೇವಾಲಯಕ್ಕೆ ಇಂದು ಅಣ್ಣಾವ್ರ ಕುಟುಂಬ ಭೇಟಿಕೊಟ್ಟು ವಿಶೇಷ ಪೂಜೆ ಸಲ್ಲಿಸಿದರು.

ಅಶ್ವಿನಿ ಪುನೀತ್ ರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್, ವಿನಯ್ ರಾಜ್ ಕುಮಾರ್ ಸೇರಿದಂತೆ ಮನೆ ಮಂದಿ ಮನೆ ದೇವರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿ ಪ್ರಸಾದ ಸೇವಿಸಿದ್ದಾರೆ.

ಶಿವರಾಜ್ ಕುಮಾರ್,  ರಾಘವೇಂದ್ರ ರಾಜ್ ಕುಮಾರ್ ಹಾಗೂ ಪುನೀತ್ ರಾಜ್ ಕುಮಾರ್ ಮೂವರು ಒಟ್ಟಾಗಿ  ಈ ದೇವಾಲಯಕ್ಕೆ ಬರಲು ದಿನಾಂಕವೂ ನಿಗದಿಯಾಗಿತ್ತು, ಆದರೆ ಅಷ್ಟರಲ್ಲಾಗಲೇ ಪುನೀತ್ ಅಸುನೀಗಿದರು. ಅಪ್ಪು ನಿಧನರಾಗಿ ಒಂದು ವರ್ಷವಾದ ನಂತರ ಈಗ ಮನೆಮಂದಿ ಮನೆದೇವರ ದರ್ಶನ ಪಡೆದಿದ್ದಾರೆ, ದೇವಾಲಯ ಕಂಡು ಎಲ್ಲರೂ ಸಂತಸಪಟ್ಟರು ಎಂದು ಅರ್ಚಕ ಮಾಹಿತಿ ನೀಡಿದ್ದಾರೆ.

ಇನ್ನು,,ಅಣ್ಣಾವ್ರ ಕುಟುಂಬ ದೇವಾಲಯಕ್ಕೆ ಬಂದ ಮಾಹಿತಿ ತಿಳಿದ ಜನರು ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದರು. ಫೋಟೋ ಕ್ಲಿಕ್ಕಿಸಿಕೊಳ್ಳಲು ಹರಸಾಹಸಪಟ್ಟರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/HeAiP3WAQfT6ajtrJVJ4kP

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ