ಪುನೀತ್ ಸಾವಿನ ಶಾಕ್ ನಿಂದ ಹೊರಬರಲು ಸಾಧ್ಯವಾಗುತಿಲ್ಲ: ತಮಿಳು ನಟ ಶಿವಕಾರ್ತಿಕೇಯನ್ - Mahanayaka
9:14 PM Saturday 18 - October 2025

ಪುನೀತ್ ಸಾವಿನ ಶಾಕ್ ನಿಂದ ಹೊರಬರಲು ಸಾಧ್ಯವಾಗುತಿಲ್ಲ: ತಮಿಳು ನಟ ಶಿವಕಾರ್ತಿಕೇಯನ್

shivakarthikeyan
02/11/2021

ಬೆಂಗಳೂರು: ಬೆಂಗಳೂರಿಗೆ ಬಂದಾಗ ಮನೆಗೆ ಬಾ ಅಂತ ಅಪ್ಪು ಅಣ್ಣ ಹೇಳ್ತಿದ್ರು… ಈಗ ಮನೆಗೆ ಬಂದಿದ್ದೇನೆ. ಆದರೆ, ಅಪ್ಪು ಅವರೇ ಈಗ ಇಲ್ಲ ಎಂದು ತಮಿಳು ಖ್ಯಾತ ನಟ ಶಿವಕಾರ್ತಿಕೇಯನ್ ಹೇಳಿದರು.


Provided by

ನಿನ್ನೆ ಬೆಂಗಳೂರಿಗೆ ಆಗಮಿಸಿದ್ದ ಅವರು, ಪುನೀತ್ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ. ನಟ ಶಿವರಾಜ್ ಕುಮಾರ್  ಅವರನ್ನು ಭೇಟಿ ಮಾಡಿ ಸಾಂತ್ವನ ಹೇಳಿದ್ದಾರೆ. ಬಳಿಕ ಅಪ್ಪು ಸಮಾಧಿ ಬಳಿಗೂ ತೆರಳಿದರು.

ಪುನೀತ್ ಅವರನ್ನು ಕಳೆದುಕೊಂಡು ಫ್ಯಾನ್ಸ್ ಗೆ ಎಷ್ಟು ದುಃಖವಾಗಿದೆ ಎನ್ನುವುದು ನನಗೆ ಅರ್ಥವಾಗುತ್ತದೆ. ನನಗೆ ಇನ್ನು ಕೂಡ ಈ ಶಾಕ್ ನಿಂದ ಆಚೆ ಬರಲು ಸಾಧ್ಯವಾಗುತ್ತಿಲ್ಲ. ಪುನೀತ್ ರಾಜ್ ಕುಮಾರ್ ಕೇವಲ ತೆರೆಯ ಮೇಲಿನ ಹೀರೋ ಆಗಿರಲಿಲ್ಲ. ಅವರು ನಿಜ ಜೀವನದಲ್ಲಿಯೂ ಹೀರೋ ಆಗಿದ್ದರು ಎಂದು ಶಿವಕಾರ್ತಿಕೇಯನ್ ಹೇಳಿದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

 

ಇತ್ತೀಚಿನ ಸುದ್ದಿ