ರಸ್ತೆ ಗುಂಡಿಯಿಂದ ಬೇಸತ್ತು ಪಲಾವ್, ವಡೆ, ನಿಂಬೆಹಣ್ಣು ಹೂವು ಇಟ್ಟು ಪೂಜೆ ಮಾಡಿದ ಸಾರ್ವಜನಿಕರು - Mahanayaka
8:11 AM Thursday 18 - September 2025

ರಸ್ತೆ ಗುಂಡಿಯಿಂದ ಬೇಸತ್ತು ಪಲಾವ್, ವಡೆ, ನಿಂಬೆಹಣ್ಣು ಹೂವು ಇಟ್ಟು ಪೂಜೆ ಮಾಡಿದ ಸಾರ್ವಜನಿಕರು

road
09/11/2024

ಚಿಕ್ಕಮಗಳೂರು:  ರಸ್ತೆಯಲ್ಲಿನ ಗುಂಡಿಯಿಂದ ಬೇಸತ್ತು ಸಾರ್ವಜನಿಕರು ರಸ್ತೆಗೆ ಪೂಜೆ ಮಾಡಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಘಟನೆ ಚಿಕ್ಕಮಗಳೂರು ನಗರದ ವಿಜಯಪುರ ಮುಖ್ಯ ರಸ್ತೆಯಲ್ಲಿ ನಡೆದಿದೆ.


Provided by

ಚಿಕ್ಕಮಗಳೂರು ನಗರದ ವಿಜಯಪುರ ಮುಖ್ಯ ರಸ್ತೆಯಲ್ಲಿ ಮೊದಲು ಕಾಮಗಾರಿಗೆ ಗುಂಡಿ ತೆಗೆಯಲಾಗಿತ್ತು. ನಂತರ ಗುಂಡಿ ಮುಚ್ಚಿದ್ದರೂ ಮತ್ತೆ ರಸ್ತೆ ಗುಂಡಿಯಾಗಿತ್ತು.  ಈ ಗುಂಡಿಯಿಂದಾಗಿ ಹಲವು ಬೈಕ್ ಗಳು ಇಲ್ಲಿ ಅಪಘಾತಕ್ಕೀಡಾಗಿದೆ.

road

ಈ ಬಗ್ಗೆ ಗುಂಡಿ ಮುಚ್ಚುವಂತೆ  ಹಲವು ಬಾರಿ  ನಗರಸಭೆಗೆ ಮನವಿ ಮಾಡಿಕೊಂಡರೂ, ನಗರ ಸಭೆ ಅಧಿಕಾರಿಗಳು ಕ್ಯಾರೇ ಅಂದಿರಲಿಲ್ಲ.  ಅಧಿಕಾರಿಗಳ ವರ್ತನೆಯಿಂದ ಬೇಸತ್ತು, ರಸ್ತೆಯಲ್ಲಿನ ಗುಂಡಿಗೆ ಪೂಜೆ ಮಾಡಿ ಪಲಾವ್, ವಡೆ, ನಿಂಬೆಹಣ್ಣು ಹೂವು, ಬ್ಯಾರಿಕೇಡ್ ಇಟ್ಟು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಸ್ತೆ ಸುರಕ್ಷತೆ ಅಂತ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ, ಭಾಷಣ ಬಿಗಿಯುವ ಅಧಿಕಾರಿಗಳು, ತಾವು ಮಾತ್ರ ರಸ್ತೆಯ ಬದಿಗಳಲ್ಲಿ ಹೊಂಡ ಗುಂಡಿಗಳಿದ್ದರೂ, ಸರಿಪಡಿಸುತ್ತಿಲ್ಲ. ಈ ಬಗ್ಗೆ ಸಾರ್ವಜನಿಕರೇ ಗಮನಕ್ಕೆ ತಂದರೂ ಸರಿಪಡಿಸಲು ಮುಂದಾಗಿಲ್ಲ. ಪಲಾವ್, ವಡೆ, ನಿಂಬೆಹಣ್ಣು ಹೂವು, ಬ್ಯಾರಿಕೇಡ್ ಇಟ್ಟು ಸಾರ್ವಜನಿಕರು ಅಧಿಕಾರಿಗಳ ಗಮನಕ್ಕೆ ತರಬೇಕಾದ ಪ್ರಸಂಗವನ್ನು ಅಧಿಕಾರಿಗಳು ಸೃಷ್ಟಿಸಿರುವುದು ನಿಜಕ್ಕೂ ದುರಂತ, ಮೈಗಳ್ಳ ಅಧಿಕಾರಿಗಳು ಇನ್ನಾದರೂ ಎಚ್ಚೆತ್ತುಕೊಳ್ಳುತ್ತಾರಾ ಕಾದು ನೋಡಬೇಕಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

ಇತ್ತೀಚಿನ ಸುದ್ದಿ