ಪುತ್ರಿಯ ಬೀದಿ ರಂಪಾಟಕ್ಕೆ ಅರವಿಂದ್ ಲಿಂಬಾವಳಿ ಹೇಳಿದ್ದೇನು? - Mahanayaka

ಪುತ್ರಿಯ ಬೀದಿ ರಂಪಾಟಕ್ಕೆ ಅರವಿಂದ್ ಲಿಂಬಾವಳಿ ಹೇಳಿದ್ದೇನು?

aravind limbavali
10/06/2022

ಬೆಂಗಳೂರು: ಟ್ರಾಫಿಕ್ ಪೊಲೀಸ್ ಜೊತೆಗೆ ಅರವಿಂದ್ ಲಿಂಬಾವಳಿ ಅವರ ಪುತ್ರಿ ನಡೆಸಿದ ರಂಪಾಟಕ್ಕೆ ಸಂಬಂಧಿಸಿದಂತೆ ಪುತ್ರಿಯ ರಂಪಾಟಕ್ಕೆ ಲಿಂಬಾವಳಿ ಕ್ಷಮೆಯಾಚಿಸಿದ್ದಾರೆ.

ನಿನ್ನೆ ಸಂಜೆ 4.15ರ ಸುಮಾರಿಗೆ ರಾಶ್ ಡ್ರೈವಿಂಗ್ ಮಾಡಿಕೊಂಡು ಬಿಎಂಡಬ್ಲು ಕಾರಿನಲ್ಲಿ ಕ್ವೀನ್ಸ್ ರಸ್ತೆಯ ಮಾರ್ಗವಾಗಿ ಕಾಫಿ ಬೋರ್ಡ್ ಜಂಕ್ಷನ್ ಕಡೆಗೆ ಲಿಂಬಾವಳಿ ಪುತ್ರಿ ಬಂದಿದ್ದು, ಈ ವೇಳೆ  ಪೊಲೀಸರು ಅಡ್ಡ ಹಾಕಿದ್ದರು. ಕಾರಿನಿಂದ ಇಳಿದ ಕೂಡಲೇ ಲಿಂಬಾವಳಿ ಪುತ್ರಿ ಪೊಲೀಸರೊಂದಿಗೆ ಮಾತಿನ ಚಕಮಕಿ ನಡೆಸಿದ್ದಾರೆ. ಜೊತೆಗೆ ಅಪ್ಪನ ಹೆಸರು ಹೇಳಿಕೊಂಡು ಪೊಲೀಸರ ವಿರುದ್ಧ ವಾಗ್ದಾಳಿ ನಡೆಸಿದ್ದರು.

ಪುತ್ರಿಯ ಬೀದಿ ರಂಪಾಟ ಮಾಧ್ಯಮಗಳಲ್ಲಿ ಬಿತ್ತರ ಆಗ್ತಿದ್ದಂತೆ ಖುದ್ದು ಶಾಸಕರೇ ಮಗಳು ಮಾಡಿದ ಕೆಲಸಕ್ಕೆ ಕ್ಷಮೆ ಯಾಚಿಸಿದ್ದಾರೆ. ಮಗಳ ಬೀದಿ ರಂಪ ಮಾಧ್ಯಮಗಳಲಿ ಬಿತ್ತರ ಆಗ್ತಿದ್ದಂತೆ ಮೊದಲು ಶಾಸಕರು ಕೂಡ ಗರಂ ಆಗಿದ್ದರು. ಇದೊಂದು ಇಶ್ಯುನಾ? ಕಾಮನ್ ಸೆನ್ಸ್ ಇಲ್ವಾ? ಇದನ್ನೆಲ್ಲಾ ವರದಿ ಮಾಡ್ತಿರಾ ಎಂದು ಮಾಧ್ಯಮಗಳ ಮೇಲೆ ಹರಿಹಾಯ್ದಿದ್ದರು.

ಇನ್ನೂ  ದಂಡಕಟ್ಟಲು ಲಿಂಬಾವಳಿ ಪುತ್ರಿ ಒಪ್ಪಿರಲಿಲ್ಲ. ಈ ವೇಳೆ ಆಕೆಯ ಜೊತೆಗಿದ್ದ ಯುವಕ ಮಧ್ಯಪ್ರವೇಶಿಸಿ ದಂಡ ಪಾವತಿಸಿದ್ದಾನೆ.  ಒಟ್ಟು 10 ಸಾವಿರ ರೂಪಾಯಿ ದಂಡ ಪಾವತಿಸಿದ ಬಳಿಕ ಅವರು ಸ್ಥಳದಿಂದ ತೆರಳಿದ್ದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ನೂಪುರ್ ಶರ್ಮಾ ಪ್ರತಿಕೃತಿಗೆ ನಡು ರಸ್ತೆಯಲ್ಲಿ ಗಲ್ಲು! | ಹಿಂದೂ ಸಂಘಟನೆಗಳಿಂದ ಆಕ್ರೋಶ

ರಾಜ್ಯಸಭೆ ಕದನ ಶುರು: ವಿಧಾನಸೌಧಕ್ಕೆ ಆಗಮಿಸಿ ಮತಚಲಾಯಿಸುತ್ತಿರುವ ಶಾಸಕರು

ಎನ್ ಎಸ್ ಯುಐ ಕಾರ್ಯಕರ್ತರ ಬಿಡುಗಡೆ: “ನಾಡಿಗಾಗಿ ಜೈಲಿಗೆ ಹೋಗಿದ್ದಕ್ಕೆ ಹೆಮ್ಮೆಯಿದೆ”

ತರಗತಿಯಲ್ಲಿ ಸಾವರ್ಕರ್ ಫೋಟೋ: ಮಂಗಳೂರಿನ  ಕಾಲೇಜಿನಲ್ಲಿ ಮತ್ತೊಂದು ವಿವಾದ!

 

ಇತ್ತೀಚಿನ ಸುದ್ದಿ