ಪುಣೆ ಅಪಘಾತ ಕೇಸ್: ಅರೋಪಿಗೆ ಆದ್ಯತೆಯ ಉಪಚಾರ ನೀಡಿದ್ದು ಯಾಕೆ ಎಂದು ಪ್ರಶ್ನಿಸಿದ ರಾಹುಲ್ ಗಾಂಧಿ - Mahanayaka

ಪುಣೆ ಅಪಘಾತ ಕೇಸ್: ಅರೋಪಿಗೆ ಆದ್ಯತೆಯ ಉಪಚಾರ ನೀಡಿದ್ದು ಯಾಕೆ ಎಂದು ಪ್ರಶ್ನಿಸಿದ ರಾಹುಲ್ ಗಾಂಧಿ

22/05/2024


Provided by

ಪುಣೆಯಲ್ಲಿ ನಡೆದಿದ್ದ ಅಪಘಾತ ಘಟನೆಯ ಕುರಿತು ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ನಾಯಕ ಹಾಗೂ ವಯನಾಡ್ ಸಂಸದ ರಾಹುಲ್ ಗಾಂಧಿ, “ಉದ್ಯಮಿ ವಿಶಾಲ್ ಅಗರ್ವಾಲ್ ಅವರ 17 ವರ್ಷದ ಪುತ್ರನಿಗೆ ಆದ್ಯತೆಯ ಉಪಚಾರ ನೀಡಿದ್ದು ಏಕೆ?” ಎಂದು ಪ್ರಶ್ನಿಸಿದ್ದಾರೆ.

ಈ ಕುರಿತು ವಿಡಿಯೊ ಸಂದೇಶವೊಂದನ್ನು ಬಿಡುಗಡೆ ಮಾಡಿರುವ ಅವರು, “ಒಂದು ವೇಳೆ ಆಟೋರಿಕ್ಷಾ ಮತ್ತು ಕ್ಯಾಬ್ ಚಾಲಕರು ಅಥವಾ ಓಲಾ ಅಥವಾ ಉಬರ್ ಚಾಲಕರು ಅಥವಾ ಬಸ್ ಅಥವಾ ಟ್ರಕ್ ಚಾಲಕರು ಅನುದ್ದೇಶಿತವಾಗಿ ಅಪಘಾತವೆಸಗಿ, ಯಾರಾದರೂ ಮೃತಪಟ್ಟರೆ, ಅಂಥವರನ್ನು 10 ವರ್ಷಗಳ ಕಾಲ ಜೈಲಲ್ಲಿರಿಸಿ, ಅವರ ವಾಹನಗಳ ಬೀಗದ ಕೈಗಳನ್ನು ಎತ್ತೆಸೆಯಲಾಗುತ್ತದೆ. ಆದರೆ, ಶ್ರೀಮಂತ ಕುಟುಂಬದ ಹದಿಹರೆಯದ ಬಾಲಕನೊಬ್ಬ ಮದ್ಯ ಸೇವನೆ ಮಾಡಿ, ತನ್ನ ಪೋರ್ಷೆ ಕಾರಿನಲ್ಲಿ ಅಪಘಾತವೆಸಗಿ, ಇಬ್ಬರನ್ನು ಹತ್ಯೆಗೈದರೆ, ಅಂಥ ವ್ಯಕ್ತಿಗೆ ಪ್ರಬಂಧ ಬರೆಯುವಂತೆ ಸೂಚಿಸಲಾಗುತ್ತದೆ. ಅದೇ ಬಸ್, ಟ್ರಕ್, ಆಟೋರಿಕ್ಷಾ ಅಥವಾ ಕ್ಯಾಬ್ ಚಾಲಕರಿಗೆ ಮಾತ್ರ ಅಂಥ ಪ್ರಬಂಧ ಬರೆಯುವಂತೆ ಯಾಕೆ ಸೂಚಿಸುವುದಿಲ್ಲ?” ಎಂದು ಪ್ರಶ್ನಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ವಿರುದ್ಧವೂ ವಾಗ್ದಾಳಿ ನಡೆಸಿರುವ ರಾಹುಲ್ ಗಾಂಧಿ, “ನರೇಂದ್ರ ಮೋದಿ ಎರಡು ಭಾರತಗಳನ್ನು ಸೃಷ್ಟಿಸುತ್ತಿದ್ದು, ಇಲ್ಲಿ ನ್ಯಾಯವು ಸಂಪತ್ತನ್ನು ಅವಲಂಬಿಸಿದೆ” ಎಂದು ವ್ಯಂಗ್ಯವಾಡಿದ್ದಾರೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ