ರಾಹುಲ್ ಗಾಂಧಿ ದೇಶದ ಮಹಾನಾಯಕ ಆಗುತ್ತಾರೆ | ಮಲ್ಲಿಕಾರ್ಜುನ ಖರ್ಗೆ - Mahanayaka

ರಾಹುಲ್ ಗಾಂಧಿ ದೇಶದ ಮಹಾನಾಯಕ ಆಗುತ್ತಾರೆ | ಮಲ್ಲಿಕಾರ್ಜುನ ಖರ್ಗೆ

rahul kharge
10/04/2021

ಬೆಳಗಾವಿ: ಬಿಜೆಪಿಯವರು ರಾಹುಲ್ ಗಾಂಧಿಗೆ ಹೆದರುತ್ತಾರೆ, ಹಾಗಾಗಿ ಪದೇ ಪದೇ ರಾಹುಲ್ ಗಾಂಧಿ ಹೆಸರು ಬಳಸುತ್ತಾರೆ ಎಂದು ಕಾಂಗ್ರೆಸ್ ನ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

ಬೆಳಗಾವಿಯಲ್ಲಿ ಮಾತನಾಡಿದ ಅವರು, ರಾಹುಲ್ ಗಾಂಧಿಯವರಿಗೆ ಏನೂ ಗೊತ್ತಿಲ್ಲ ಎಂದು ಬಿಜೆಪಿಯವರು ಬಿಜೆಪಿಯವರು ಹೇಳುತ್ತಾರೆ. ಪಶ್ಚಿಮ ಬಂಗಾಳದಲ್ಲಿ ರಾಹುಲ್ ಗಾಂಧಿ ಹೆಸರಿಲ್ಲದೆ ಚುನಾವಣೆ ಮಾಡುತ್ತಿದ್ದಾರೆಯೇ? ಕೇರಳ, ತಮಿಳುನಾಡಿನಲ್ಲಿಯೂ ರಾಹುಲ್ ಗಾಂಧಿ ಹೆಸರು ಹೇಳಿ ಟೀಕೆ ಮಾಡುತ್ತಾರೆ ಎಂದು ಅವರು ಹೇಳಿದರು.

ರಾಹುಲ್ ಗಾಂಧಿ ಮುಂದೆ ದೇಶದ ಮಹಾನಾಯಕ ಆಗುತ್ತಾರೆ. ರಾಹುಲ್ ಗಾಂಧಿಯವರನ್ನು ಕುಗ್ಗಿಸಲು ಪದೇಪದೇ ಬಿಜೆಪಿಯವರು ಅವರ ಹೆಸರನ್ನು ಪ್ರಸ್ತಾಪಿಸುತ್ತಾರೆ ಎಂದು ಖರ್ಗೆ ವಿಶ್ವಾಸ ವ್ಯಕ್ತಪಡಿಸಿದರು.

ಇತ್ತೀಚಿನ ಸುದ್ದಿ