ಕಾಂಗ್ರೆಸ್ ಯುವ ನಾಯಕ ರಾಹುಲ್ ಗಾಂಧಿಗೆ ಕೊರೊನಾ ಪಾಸಿಟಿವ್ - Mahanayaka
10:39 AM Thursday 29 - January 2026

ಕಾಂಗ್ರೆಸ್ ಯುವ ನಾಯಕ ರಾಹುಲ್ ಗಾಂಧಿಗೆ ಕೊರೊನಾ ಪಾಸಿಟಿವ್

rahul gandhi
20/04/2021

ನವದೆಹಲಿ:  ಕಾಂಗ್ರೆಸ್ ನ ಯುವ ನಾಯಕ ರಾಹುಲ್ ಗಾಂಧಿ ಅವರಿಗೆ ಕೊರೊನಾ ಪಾಸಿಟಿವ್ ವರದಿ ಬಂದಿದ್ದು, ಈ ಬಗ್ಗೆ ಟ್ವಿಟ್ಟರ್ ನಲ್ಲಿ ಅವರು ಮಾಹಿತಿ ನೀಡಿದ್ದಾರೆ.

ನನಗೆ ಕೊರೊನಾ ದೃಢವಾಗಿದ್ದು, ನನ್ನ ಸಂಪರ್ಕದಲ್ಲಿ ಯಾರೆಲ್ಲ ಇದ್ದರೋ ಅವರೆಲ್ಲರೂ ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳುವಂತೆ ಹೇಳಿರುವ ಅವರು,  ಎಲ್ಲರೂ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.

ನಿನ್ನೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಕೊರೊನಾ ತಗಲಿತ್ತು. ಇದರ ಬೆನ್ನಲ್ಲೇ ರಾಹುಲ್ ಗಾಂಧಿ ಅವರಿಗೂ ಕೊರೊನಾ ತಗಲಿದೆ. ದೇಶದ ಗಣ್ಯರಿಗೆ ಕೊರೊನಾ ಸೋಂಕು ತಗಲುತ್ತಿದೆ. ಈ ನಡುವೆ ಜನ ಸಾಮಾನ್ಯರಲ್ಲಿಯೂ ಕೊರೊನಾ ಆತಂಕ ಮೂಡಿದೆ. ಜನರ ಸುರಕ್ಷತೆಯ ಪ್ರಶ್ನೆಗಳ ನಡುವೆಯೇ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ನಿರ್ಲಕ್ಷ್ಯ ಅಳತೆ ಮೀರಿ ಸಾಗಿದೆ.

ಇತ್ತೀಚಿನ ಸುದ್ದಿ