ರೈಲು ನಿಲ್ದಾಣದ ಫ್ಲ್ಯಾಟ್ ಫಾರಂ ದರ 10 ರೂ.ನಿಂದ ಎಷ್ಟಕ್ಕೆ ಏರಿದೆ ಗೊತ್ತಾ? - Mahanayaka
1:19 AM Wednesday 15 - October 2025

ರೈಲು ನಿಲ್ದಾಣದ ಫ್ಲ್ಯಾಟ್ ಫಾರಂ ದರ 10 ರೂ.ನಿಂದ ಎಷ್ಟಕ್ಕೆ ಏರಿದೆ ಗೊತ್ತಾ?

02/03/2021

ಮುಂಬೈ: ಎತ್ತಿಗೆ ಜ್ವರ ಬಂದ್ರೆ… ಕೋಣಕ್ಕೆ ಬರೆ ಅಂತ ಗಾದೆ ಮಾತು ಕೇಳಿರಬಹುದು. ಆದರೆ ಮಹಾರಾಷ್ಟ್ರದಲ್ಲಿ ಕೊರೊನಾ ಬಂದಿದ್ದಕ್ಕೆ ರೈಲು ನಿಲ್ದಾಣದ ಫ್ಲಾಟ್ ಫಾರಂ ಟಿಕೆಟ್ ದರವನ್ನು 10 ರೂಪಾಯಿಗಳಿಂದ 50 ರೂಪಾಯಿಗೆ ಏರಿಕೆ ಮಾಡಲಾಗಿದೆ.


Provided by

ಮುಂಬೈನ ಛತ್ರಪತಿ ಶಿವಾಜಿ ಟರ್ಮಿನಸ್, ದಾದರ್, ಲೋಕಮಾನ್ಯ ತಿಲಕ್, ಟರ್ಮಿನಸ್, ಥಾಣೆ, ಕಲ್ಯಾಣ್, ಪನ್ವೇಲ್ ಮತ್ತು ಭೀವಂಡಿ ನಿಲ್ದಾಣಗಳಲ್ಲಿ ಈ ಹೊಸ ದರ ಅನ್ವಯವಾಗಲಿದೆ.

ಈ ಹೊಸ ದರ ಜೂನ್ 15ರವರೆಗೆ ಅನ್ವಯವಾಗಲಿದೆ.  ಈ ಮಧ್ಯೆ ರೈಲ್ವೆಯ ಜನಸಂಪರ್ಕ ಅಧಿಕಾರಿ ಶಿವಾಜಿ ಸುತಾರ್ ಹೇಳಿದ್ದಾರೆ. ಕೆಲವು ದಿನಗಳ ಹಿಂದೆ ರೈಲ್ವೆ ಸಚಿವಾಲಯ ಅಲ್ಪ ದೂರದ ಟಿಕೆಟ್ ದರವನ್ನು ಹೆಚ್ಚಿಸಿತ್ತು. ಇದೀಗ ಪ್ಲ್ಯಾಟ್ ಫಾರಂ ಟಿಕೆಟ್ ದರ ಸಹ ಏರಿಕೆಯಾಗಿದೆ.

ಇತ್ತೀಚಿನ ಸುದ್ದಿ