ರೈಲಿನಡಿಗೆ ತಲೆಯಿಟ್ಟು ಪಿಯು ವಿದ್ಯಾರ್ಥಿ ಆತ್ಮಹತ್ಯೆಗೆ ಶರಣು! - Mahanayaka
7:33 AM Wednesday 20 - August 2025

ರೈಲಿನಡಿಗೆ ತಲೆಯಿಟ್ಟು ಪಿಯು ವಿದ್ಯಾರ್ಥಿ ಆತ್ಮಹತ್ಯೆಗೆ ಶರಣು!

crime news
25/11/2021


Provided by

ಹೊನ್ನಾವರ: ಪ್ರಥಮ ಪಿಯು ವಿದ್ಯಾರ್ಥಿಯೋರ್ವ  ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯಲ್ಲಿ ನಡೆದಿದ್ದು, ಮೃತ ವಿದ್ಯಾರ್ಥಿ ಹೊನ್ನಾವರ ಪಟ್ಟಣದ ಎಸ್ ಡಿಎಂ ಕಾಲೇಜಿನ ವಿದ್ಯಾರ್ಥಿ ಎಂದು ವರದಿಯಾಗಿದೆ.

17 ವರ್ಷ ವಯಸ್ಸಿನ ವಿಶಾಲ ಗೌಡ ಆತ್ಮಹತ್ಯೆಗೆ ಶರಣಾಗಿರುವ ವಿದ್ಯಾರ್ಥಿಯಾಗಿದ್ದು, ತಾಲೂಕಿನ ಮುಗ್ವಾ ಹಳಗೇರಿ ಮೂಲದ ಈತ ಇಲ್ಲಿನ ಅನಂತವಾಡಿ ಕೋಟಾದಲ್ಲಿ ವಾಸಿಸುತ್ತಿದ್ದ ಎಂದ ತಿಳಿದು ಬಂದಿದೆ.

ಚಲಿಸುವ ರೈಲಿಗೆ ತಲೆಯಿಟ್ಟು ವಿದ್ಯಾರ್ಥಿ ಆತ್ಮಹತ್ಯೆಗೆ ಶರಣಾಗಿದ್ದು, ಪರಿಣಾಮವಾಗಿ ವಿದ್ಯಾರ್ಥಿಯ ದೇಹ ಛಿದ್ರವಾಗಿ ಚೆಲ್ಲಾಪಿಲ್ಲಿಯಾಗಿದೆ. ಇನ್ನೂ ಘಟನೆಯ ಮಾಹಿತಿ ತಿಳಿದ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಸಾರ್ವಜನಿಕರ ಸಹಕಾರದೊಂದಿಗೆ ಮೃತದೇಹವನ್ನು ಸ್ಥಳಾಂತರಗೊಳಿಸಿದ್ದಾರೆ ಎಂದು ತಿಳಿದು ಬಂದಿದೆ.

ವಿದ್ಯಾರ್ಥಿಯ ಆತ್ಯಹತ್ಯೆಗೆ ಕಾರಣ ಏನು ಎನ್ನುವುದು ತಿಳಿದು ಬಂದಿಲ್ಲ. ಸದ್ಯ ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ginhq56yzxz2MmHFl94DFN

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಜಾತಿ ಪ್ರಜ್ಞೆಯ ಬೇರುಗಳೂ ಮಾರುಕಟ್ಟೆಯ ಒತ್ತಡಗಳೂ | ವ್ಯವಸ್ಥೆಯನ್ನು ವಿಭಜಿಸುವ ಆಹಾರ ಶೋಷಿತರನ್ನು ಒಗ್ಗೂಡಿಸಲೂ ಸಾಧ್ಯ

ಬಡ ಜನತೆಗೆ ಸಿಹಿ ಸುದ್ದಿ ನೀಡಿದ ಪ್ರಧಾನಿ: ಉಚಿತ ಅಕ್ಕಿ ಯೋಜನೆ ಮುಂದುವರಿಕೆ

ಪುನೀತ್ ರಾಜ್ ಕುಮಾರ್ ಜೀವನಾಧರಿತ ಸಿನಿಮಾ: ನಾಯಕ ಯಾರು ಗೊತ್ತಾ?

ರಾಕಿಂಗ್ ಸ್ಟಾರ್ ಯಶ್ ಕ್ಷಮೆ ಕೇಳಿ ದೊಡ್ಡತನ ಮೆರೆದ ಆಮೀರ್ ಖಾನ್ | ಅಷ್ಟಕ್ಕೂ ನಡೆದದ್ದೇನು ಗೊತ್ತಾ?

ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗೆ ಬೆದರಿಕೆ: ಹಿಂದೂ ಜಾಗರಣ ವೇದಿಕೆಯ ಮುಖಂಡನ ವಿರುದ್ಧ ಪ್ರಕರಣ ದಾಖಲು

ಮಂಗಳೂರು: ಬಾಲಕಿಯ ಹತ್ಯೆ ಪ್ರಕರಣದ ನಾಲ್ವರು ಆರೋಪಿಗಳು ಅರೆಸ್ಟ್: ಕೊಲೆಗೂ ಮುನ್ನ ನಡೆದಿತ್ತು ಸಾಮೂಹಿಕ ಅತ್ಯಾಚಾರ

ಇತ್ತೀಚಿನ ಸುದ್ದಿ