ರೀಲ್ಸ್ ಮಾಡುತ್ತಿದ್ದವರ ಮೇಲೆಯೇ ಹರಿದ ರೈಲು: ಇಬ್ಬರು ಯುವಕರ ದುರ್ಮರಣ
ನವದೆಹಲಿ: ರೈಲ್ವೇ ಟ್ರ್ಯಾಕ್ ನಲ್ಲಿ ರೀಲ್ಸ್ ಮಾಡುತ್ತಿದ್ದ ಯುವಕರಿಬ್ಬರು ರೈಲಿನಡಿಗೆ ಸಿಲುಕಿ ಮೃತಪಟ್ಟ ಘಟನೆ ನವದೆಹಲಿಯಲ್ಲಿ ನಡೆದಿದೆ.
ವನ್ಶ್ ಶರ್ಮಾ(23) ಹಾಗೂ ಮೋನು ಅಲಿಯಾಸ್ ವರುಣ್(20) ಮೃತಪಟ್ಟ ಯುವಕರಾಗಿದ್ದಾರೆ. ಇವರಿಬ್ಬರು ಅಂಗಡಿ ಸೇಲ್ಸ್ ಮ್ಯಾನ್ಸ್ ಆಗಿ ಕೆಲಸ ಮಾಡುತ್ತಿದ್ದರು.
ಮೃತ ಯುವಕರು ಶಾರ್ಟ್ ಫಿಲ್ಮ್, ರೀಲ್ಸ್ ಮಾಡುತ್ತಿದ್ದರು ಎನ್ನಲಾಗಿದೆ. ರೈಲ್ವೇ ಹಳಿಯಲ್ಲಿ ಇವರ ಮೊಬೈಲ್ ಕೂಡ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ರೀಲ್ಸ್ ಮಾಡುತ್ತಿದ್ದ ವೇಳೆ ದುರ್ಘಟನೆ ನಡೆದಿರಬಹುದು ಎಂದು ಅಂದಾಜಿಸಲಾಗಿದೆ.
ಬುಧವಾರ ಸಂಜೆ ಫೋನ್ ಕರೆ ಮೂಲಕ ನಮಗೆ ಮಾಹಿತಿ ತಿಳಿಯಿತು. ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ ವೇಳೆ, ಇಬ್ಬರ ಮೃತದೇಹ ಟ್ರ್ಯಾಕ್ ನ ಪಕ್ಕದಲ್ಲಿ ಬಿದ್ದಿತ್ತು. ಅವರ ಮೊಬೈಲ್ ಫೋನ್ ಗಳು ಕೂಡ ಇಲ್ಲಿಯೇ ಪತ್ತೆಯಾಗಿದ್ದವು ಎಂದು ಪೊಲೀಸರು ತಿಳಿಸಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw




























