ಮಳೆ ಅವಾಂತರ: ಎರಡು ಮನೆ, ಎಲೆಕ್ಟ್ರಾನಿಕ್ ಶಾಪ್, ಕಾರ್ ಸಂಪೂರ್ಣ ಜಖಂ - Mahanayaka
6:06 AM Tuesday 16 - September 2025

ಮಳೆ ಅವಾಂತರ: ಎರಡು ಮನೆ, ಎಲೆಕ್ಟ್ರಾನಿಕ್ ಶಾಪ್, ಕಾರ್ ಸಂಪೂರ್ಣ ಜಖಂ

chikkamagaluru
21/07/2025

ಚಿಕ್ಕಮಗಳೂರು:   ಕಾಫಿನಾಡ ಮಲೆನಾಡಲ್ಲಿ ಮಳೆಯಿಂದಾಗಿ ಅವಾಂತರ ಸೃಷ್ಟಿಯಾಗಿದ್ದು, ಕೂದಲೆಳೆ ಅಂತರದಲ್ಲಿ ಭಾರೀ ಅನಾಹುತವೊಂದು ತಪ್ಪಿದೆ.


Provided by

ಭಾರೀ ಮಳೆಯ ಹಿನ್ನೆಲೆ ಮನೆಯೊಂದರ ಗೋಡೆ ಕುಸಿದು ಬಿದ್ದ ಪರಿಣಾಮ,  ಎರಡು ಮನೆ, ಎಲೆಕ್ಟ್ರಾನಿಕ್ ಶಾಪ್, ಕಾರ್ ಸಂಪೂರ್ಣ ಜಖಂಗೊಂಡಿದೆ.

ಮೂಡಿಗೆರೆ ಪಟ್ಟಣದ ಹೊರವಲಯದ ಗಂಗನಮಕ್ಕಿಯಲ್ಲಿ ಈ ಘಟನೆ ನಡೆದಿದೆ. ಗ್ಯಾರೇಜಿಗೆ ಬಿಟ್ಟಿದ್ದ ಕಾರಿನ ಮೇಲೆಯೇ ಗೋಡೆ ಕುಸಿದು ಬಿದ್ದಿದೆ. ಅದೃಷ್ಟವಶಾತ್ ಘಟನೆ ವೇಳೆ ಮನೆಯಲ್ಲಿ ಯಾರೂ ಇಲ್ಲದ ಕಾರಣ ಪ್ರಾಣ ಹಾನಿ ತಪ್ಪಿದೆ.

ಕಾರು ಹಾಗೂ ಮನೆಯ ಮೇಲೆ ಮನೆಯ ಗೋಡೆ ಕುಸಿದಿದೆ, ಎಲೆಕ್ಟ್ರಿಕ್ ಶಾಪ್ ನ ಉಪಕರಣಗಳು ಸಂಪೂರ್ಣ ಹಾನಿಯಾಗಿವೆ. ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ಪಟ್ಟಣದ ಮೂಡಿಗೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ