ರೈತರ ಹಿತಾಸಕ್ತಿ ಕಾಪಾಡಲು ಸರ್ಕಾರ ರೈತ ವಿರೋಧಿ ಕಾಯ್ದೆ ರದ್ದು ಮಾಡಲೇ ಬೇಕು : ಶ್ರೀನಾಥ್ ಪೂಜಾರಿ - Mahanayaka
10:36 AM Saturday 23 - August 2025

ರೈತರ ಹಿತಾಸಕ್ತಿ ಕಾಪಾಡಲು ಸರ್ಕಾರ ರೈತ ವಿರೋಧಿ ಕಾಯ್ದೆ ರದ್ದು ಮಾಡಲೇ ಬೇಕು : ಶ್ರೀನಾಥ್ ಪೂಜಾರಿ

23/12/2020


Provided by

ವಿಜಯಪುರ: ಕೇಂದ್ರ ಸರ್ಕಾರ ಜಾರಿಗೆ ತರಲು ಹೊರಟಿರುವ ನೂತನ ರೈತ ತಿದ್ದುಪಡಿ ಕಾಯ್ದೆಯಿಂದ ಭವಿಷ್ಯದಲ್ಲಿ ರೈತಾಪಿ ವರ್ಗಕ್ಕೆ ಮಾರಕ ಪರಿಣಾಮ ಬೀರಲಿದ್ದು ಕೊಡಲೇ ಕೇಂದ್ರ ಸರ್ಕಾರ ರೈತರ ಹಿತಾಸಕ್ತಿ ಕಾಪಾಡಲು ರೈತ ವಿರೋಧಿ ಕಾಯ್ದೆಯನ್ನು ರದ್ದು ಮಾಡಲೇ ಬೇಕೆಂದು ನ್ಯಾಯವಾದಿ ಶ್ರೀನಾಥ್ ಪೂಜಾರಿ ಹೇಳಿದ್ದಾರೆ.

ರೈತ ವಿರೋಧಿ ಕಾಯ್ದೆ ರದ್ದು ಮಾಡಬೇಕು ಎಂದು ಆಗ್ರಹಿಸಿ ದೆಹಲಿ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸುತ್ತಿರುವ ರೈತರು ಇಂದು ಒಂದು ಹೂತ್ತಿನ ಊಟ ಬಿಡಲು ಕರೆ ನೀಡಿದ್ದ ಹಿನ್ನೆಲೆ ಅವರ ಕರೆಯನ್ನು ಬೆಂಬಲಿಸಿ ಇಂದು ಕರ್ನಾಟಕ ಜನಶಕ್ತಿ ವಿಜಯಪುರ ಜಿಲ್ಲೆಯ ಕಲಕೇರಿ ಗ್ರಾಮದ ಕಾರ್ಯಕರ್ತರು ಒಂದು ಹೊತ್ತಿನ ಊಟ ಬಿಟ್ಟು ರೈತರಿಗೆ ಬೆಂಬಲಿಸಿ ರೈತ ದಿನಾಚರಣೆ ಆಚರಿಸಿ ನಡೆದ ಧರಣಿಯಲ್ಲಿ ಪಾಲ್ಗೊಂಡು ಶ್ರೀನಾಥ್ ಪೂಜಾರಿ ಮಾತನಾಡಿದರು.

ದೆಹಲಿಯಲ್ಲಿ ನಿರಂತರವಾಗಿ ರೈತರು ಪ್ರತಿಭಟನೆ ಮಾಡುತ್ತಿದ್ದಾರೆ. ಪ್ರತಿಭಟನಾ ಸ್ಥಳದಲ್ಲಿ ಸುಮಾರು 22 ಕ್ಕೂ ಹೆಚ್ಚು ರೈತರು ತಮ್ಮ ಪ್ರಾಣವನ್ನು ಈಗಾಗಲೇ ಕಳೆದುಕೊಂಡಿದ್ದಾರೆ. ಇಷ್ಟೆಲ್ಲಾ ಆದರೂ ಕೇಂದ್ರ ಸರ್ಕಾರ ಬಂಡವಾಳಶಾಹಿಗಳಿಗೆ ಪರವಾಗಿ ನಿಂತಿದೆ ಹೊರತು ರೈತರ ಹಿತ ಕಾಪಾಡಲು ಚಿಂತನೆ ಮಾಡುತ್ತಿಲ್ಲ ಎಂದು ಈ ವೇಳೆ ಶ್ರೀನಾಥ್ ಪೂಜಾರಿ ದೂರಿದರು.

ಈ ಒಂದು ದಿನದ ಉಪವಾಸ ಧರಣಿ ಸತ್ಯಾಗ್ರಹದಲ್ಲಿ ಡಿಕೆ.ದ್ಯಾವಪ್ಪ ದೊಡ್ಡಮನಿ, ಜೈಭೀಮ್ ಮುತ್ತುಗಿ, ಗುರು ಪ್ರಸಾದ್ ಬಿಜಿ, ಅಕ್ಷಯಕುಮಾರ ವಿಜಯಪುರ  ರವಿ ಪೂಜಾರಿ ವಿಜಯಪುರ, ಬಸವರಾಜ ತಳವಾರ, ಸಂತೋಷ ಬಡಗೇರ, ಮುಲ್ಲು ನಾಟೀಕಾರ, ಶಿವಪುತ್ರ ಬಡಿಗೇರ, ಬಸವರಾಜ ಬಂಗಾರಿ, ಸಾಹೇಬಣ್ಣ ಚಲವಾದಿ ಮುತ್ತು ಬಡಿಗೇರ ಬಸವರಾಜ, ಉತ್ತಾಳಿ ಬಸವರಾಜ ಗುಡಿಸಲುಮನಿ ಅಲ್ಲದೇ ಇನ್ನಿತರ ಈ ವೇಳೆ ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ