ರೈತರ ಜೊತೆಗೆ ಕೇಂದ್ರ ಸರ್ಕಾರದ 7ನೇ ಸುತ್ತಿನ ಮಾತುಕತೆ ಏನಾಯ್ತು ಗೊತ್ತಾ? - Mahanayaka
11:42 PM Tuesday 14 - October 2025

ರೈತರ ಜೊತೆಗೆ ಕೇಂದ್ರ ಸರ್ಕಾರದ 7ನೇ ಸುತ್ತಿನ ಮಾತುಕತೆ ಏನಾಯ್ತು ಗೊತ್ತಾ?

04/01/2021

ದೆಹಲಿ:  ನೂತನ ಕೃಷಿ ಕಾಯ್ದೆಯ ವಿರುದ್ಧ ರೈತರು ನಡೆಸುತ್ತಿರುವ ಹೋರಾಟದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಹಾಗೂ ರೈತ ಮುಖಂಡರ ಜೊತೆ ಇಂದು 7ನೇ ಸುತ್ತಿನ ಮಾತಕತೆ ನಡೆದಿದ್ದು, ಈ ಬಾರಿಯೂ ಮಾತುಕತೆ ವಿಫಲವಾಗಿದೆ.


Provided by

ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಹಾಗೂ ರೈತ ಮುಖಂಡರು ಇಂದು ಸಭೆಯಲ್ಲಿ ಭಾಗಿಯಾಗಿದ್ದರು.  ಮಾತಕತೆಯ ಬಳಿಕ ಪ್ರತಿಕ್ರಿಯಿಸಿರುವ ಭಾರತೀಯ ಕಿಸಾನ್ ಸಭಾದ ಪ್ರಧಾನ ಕಾರ್ಯದರ್ಶಿ ಹನನ್ ಮೊಲ್ಲಾ, ನಾವು ಬೇರೆ ಯಾವುದೇ ವಿಚಾರದಲ್ಲಿ ಚರ್ಚೆ ನಡೆಸಲು ಸಿದ್ಧರಿಲ್ಲ. ಮೂರು ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯುವುದು ಮಾತ್ರವೇ ನಮ್ಮ ಬೇಡಿಕೆಯಾಗಿದೆ ಎಂದು ಅವರು ಹೇಳಿದ್ದು, ಈ ಬೇಡಿಕೆ ನೆರವೇರದೇ ಇದ್ದರೆ,  ನಾವು ಪ್ರತಿಭಟನೆ ಮುಂದುವರಿಸುತ್ತೇವೆ ಎಂದು ಅವರು ಹೇಳಿದ್ದಾರೆ.

ನಾವು ರೈತ ಸಂಘಟನೆಗಳ ಮುಖಂಡರೊಂದಿಗೆ  ಸುದೀರ್ಘ ಚರ್ಚೆ ನಡೆಸಲು ಸಿದ್ಧರಿದ್ದೆವು ಆದರೆ, ಮೂರು ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯಲೇ ಬೇಕು ಎಂಬ ಬೇಡಿಕೆಯನ್ನು ಅವರು ಇಟ್ಟಿರುವುದರಿಂದ ನಾವು  ಮಾತುಕತೆ ಮುಂದುವರಿಸಲು ಸಾಧ್ಯವಾಗಲಿಲ್ಲ ಎಂದು ಕೃಷಿ ಸಚಿವ ತೋಮರ್ ಹೇಳಿದ್ದಾರೆ.

ಇತ್ತೀಚಿನ ಸುದ್ದಿ