ಪಶ್ಚಿಮ ಬಂಗಾಳಕ್ಕೆ ವಿಸ್ತರಿಸಿದ ರೈತರ ಪ್ರತಿಭಟನೆ:  ಬಿಜೆಪಿಗೆ ಮುಳ್ಳಾಗುತ್ತಾ ರೈತರ ಪ್ರತಿಭಟನೆ - Mahanayaka
12:24 AM Thursday 11 - December 2025

ಪಶ್ಚಿಮ ಬಂಗಾಳಕ್ಕೆ ವಿಸ್ತರಿಸಿದ ರೈತರ ಪ್ರತಿಭಟನೆ:  ಬಿಜೆಪಿಗೆ ಮುಳ್ಳಾಗುತ್ತಾ ರೈತರ ಪ್ರತಿಭಟನೆ

18/02/2021

ನವದೆಹಲಿ:   ರೈತರು ತಮ್ಮ ಬೆಳೆಗಳನ್ನು ಕನಿಷ್ಠ ಬೆಂಬಲ ಬೆಲೆಗೆ ಮಾರಾಟ ಮಾಡಲು ಸಾಧ್ಯವಾಗದ ಕಾರಣ ಮುಂದಿನ ದಿನಗಳಲ್ಲಿ ಕೃಷಿ ಚಳುವಳಿಯನ್ನು ಪಶ್ಚಿಮ ಬಂಗಾಳಕ್ಕೆ ವಿಸ್ತರಿಸಲಾಗುವುದು ಎಂದು ಭಾರತೀಯ ಕಿಸಾನ್ ಯೂನಿಯನ್ ವಕ್ತಾರ ರಾಕೇಶ್ ಟಿಕಾಯತ್ ಗುರುವಾರ ಹೇಳಿದ್ದಾರೆ.

ಚುನಾವಣೆಗೂ ನಮ್ಮ ಹೋರಾಟಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಕೇಳಿರುವ ರಾಕೇಶ್  ರೈತರ ಬೆಳೆಗಳನ್ನು ಕನಿಷ್ಠ ಬೆಲೆಗೆ ಮಾರಾಟ ಮಾಡಲು ಕೂಡ ಸಾಧ್ಯವಾಗುತ್ತಿಲ್ಲ. ನಾವು ರೈತರೊಂದಿಗೆ ಚರ್ಚಿಸಿ ಪ್ರತಿಭಟನೆಯನ್ನು ಮುಂದುವರಿಸುತ್ತೇವೆ ಎಂದು ರಾಕೇಶ್  ಟಿಕಾಯತ್ ಹೇಳಿದರು.

ಪಶ್ಚಿಮ ಬಂಗಾಲ ಸಮುದ್ರ ತೀರದಲ್ಲಿದೆ. ಅಲ್ಲಿನ ಮೀನುಗಾರರು ಕೂಡ ತೊಂದರೆ ಅನುಭವಿಸುತ್ತಿದ್ದಾರೆ. ಮೀನುಗಾರರು ತಮ್ಮ ಜೀವವನ್ನು ಕಳೆದುಕೊಳ್ಳುತ್ತಿದ್ದಾರೆ.  ನಾವು ಕೃಷಿ ಕಾಯ್ಸೆಗಳ ಬಗ್ಗೆ ಪಶ್ಚಿಮ ಬಂಗಾಳದ ರೈತರಿಗೆ ವಿವರಿಸುತ್ತೇವೆ. ಅವರಲ್ಲಿ ಅರಿವು ಮೂಡಿಸಲು ನಮ್ಮ ಪ್ರತಿಭಟನೆಯನ್ನು  ಮುಂದುವರಿಸುತ್ತೇವೆ ಎಂದು ಅವರು ಹೇಳಿದ್ದಾರೆ.

ಇತ್ತೀಚಿನ ಸುದ್ದಿ