ರಾಜ್ ಬಿ. ಶೆಟ್ಟಿ ನಟನೆಯ ‘ರಕ್ಕಸಪುರದೋಳ್’ ಟೀಸರ್ ಬಿಡುಗಡೆ: ಕುತೂಹಲ ಮೂಡಿಸಿದ ವಿಭಿನ್ನ ಅವತಾರ - Mahanayaka
5:43 PM Tuesday 30 - December 2025

ರಾಜ್ ಬಿ. ಶೆಟ್ಟಿ ನಟನೆಯ ‘ರಕ್ಕಸಪುರದೋಳ್’ ಟೀಸರ್ ಬಿಡುಗಡೆ: ಕುತೂಹಲ ಮೂಡಿಸಿದ ವಿಭಿನ್ನ ಅವತಾರ

rakkasapuradhol
30/12/2025

ಕನ್ನಡ ಚಿತ್ರರಂಗದ ಪ್ರತಿಭಾವಂತ ನಟ ಹಾಗೂ ನಿರ್ದೇಶಕ ರಾಜ್ ಬಿ. ಶೆಟ್ಟಿ ಅಭಿನಯದ ಬಹುನಿರೀಕ್ಷಿತ ‘ರಕ್ಕಸಪುರದೋಳ್’ ಚಿತ್ರದ ಅಧಿಕೃತ ಟೀಸರ್ ಇತ್ತೀಚೆಗೆ ಬಿಡುಗಡೆಯಾಗಿದ್ದು, ಪ್ರೇಕ್ಷಕರಲ್ಲಿ ಭಾರೀ ಕುತೂಹಲ ಮೂಡಿಸಿದೆ. ಜೋಗಿ ಪ್ರೇಮ್ ಅವರ ಶಿಷ್ಯ ರವಿ ಸಾರಂಗ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದು, ಖ್ಯಾತ ಸಾಹಸ ನಿರ್ದೇಶಕ ರವಿವರ್ಮಾ ಅವರು ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.

ಈ ಟೀಸರ್‌ನಲ್ಲಿ ದಟ್ಟ ಕಾನನ, ಮಾಟ-ಮಂತ್ರ, ನಿಗೂಢ ಸರಣಿ ಸಾವುಗಳ ಝಲಕ್ ಕಾಣಿಸಿದ್ದು, ಚಿತ್ರವು ಸಸ್ಪೆನ್ಸ್ ಮತ್ತು ಹಾರರ್ ಎಲಿಮೆಂಟ್ಸ್ ಒಳಗೊಂಡಿದೆ ಎಂಬ ಸೂಚನೆ ನೀಡಿದೆ. ಪ್ರತಿ ಮನುಷ್ಯನಲ್ಲೂ ಇರುವ ಒಳ್ಳೆಯ ಮತ್ತು ಕೆಟ್ಟ ಗುಣಗಳ ಸಂಘರ್ಷದ ಕಥಾಹಂದರವನ್ನು ಈ ಸಿನಿಮಾ ಹೊಂದಿದೆ. ಅರ್ಜುನ್ ಜನ್ಯ ಅವರ ಸಂಗೀತ ಮತ್ತು ವಿಲಿಯಂ ಡೇವಿಡ್ ಅವರ ಛಾಯಾಗ್ರಹಣ ಟೀಸರ್‌ನ ಮೆರುಗನ್ನು ಹೆಚ್ಚಿಸಿವೆ.

ರಾಜ್ ಬಿ. ಶೆಟ್ಟಿ ಅವರೊಂದಿಗೆ ಸ್ವಾದಿಷ್ಟ ಕೃಷ್ಣ, ಅರ್ಚನಾ ಕೊಟ್ಟಿಗೆ ಹಾಗೂ ಬಿ. ಸುರೇಶ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ‘ಸು ಫ್ರಮ್ ಸೋ’ ಮತ್ತು ’45’ ಚಿತ್ರಗಳ ನಂತರ ರಾಜ್ ಬಿ. ಶೆಟ್ಟಿ ಮತ್ತೊಂದು ವಿಭಿನ್ನ ಪಾತ್ರದ ಮೂಲಕ ಅಭಿಮಾನಿಗಳನ್ನು ರಂಜಿಸಲು ಸಜ್ಜಾಗಿದ್ದಾರೆ. ಈ ಚಿತ್ರವು 2026ರ ಫೆಬ್ರವರಿ 6ರಂದು ತೆರೆಕಾಣಲಿದೆ. ಟೀಸರ್ ನೋಡಿದ ಸಿನೆಪ್ರಿಯರು ಇದೊಂದು ಗ್ಯಾರಂಟಿ ಹಿಟ್ ಸಿನಿಮಾ ಎಂದು ಅಭಿಪ್ರಾಯಪಟ್ಟಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ