“ರಾಜಭವನ ಚಲೋ” ನಾಟಕ ಚೆನ್ನಾಗಿದೆ ಎಂದ ರಾಜ್ಯ ಬಿಜೆಪಿ - Mahanayaka
3:53 AM Wednesday 17 - September 2025

“ರಾಜಭವನ ಚಲೋ” ನಾಟಕ ಚೆನ್ನಾಗಿದೆ ಎಂದ ರಾಜ್ಯ ಬಿಜೆಪಿ

20/01/2021

ಬೆಂಗಳೂರು:  3 ಕೃಷಿ ತಿದ್ದುಪಡಿ ಕಾಯ್ದೆಗಳನ್ನು ವಿರೋಧಿಸಿ ಬೆಂಗಳೂರಿನಲ್ಲಿ ಕಾಂಗ್ರೆಸ್ ಹಾಗೂ ರೈತ ಸಂಘಟನೆಗಳು ನಡೆಸುತ್ತಿರುವ ರಾಜಭವನ ಚಲೋ ಬೃಹತ್ ಪ್ರತಿಭಟನೆಗೆ  ರಾಜ್ಯ ಬಿಜೆಪಿ ಕಾಂಗ್ರೆಸ್ ನ್ನು ವ್ಯಂಗ್ಯವಾಡಿದೆ.


Provided by

ಅಧಿಕಾರದುದ್ದಕ್ಕೂ ರೈತರ ಆತ್ಮಹತ್ಯೆಗೆ ಕಾರಣವಾದ ಕಾಂಗ್ರೆಸ್, ಈಗ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಜಾರಿಗೆ ತಂದಿರುವ ರೈತ ಪರ ಕಾಯ್ದೆಗಳಿಗೆ ನಾಟಕೀಯ ವಿರೋಧ ವ್ಯಕ್ತಪಡಿಸಿದೆ. ನೀವು ರೈತರ ಪರ ಆಡಳಿತ ನಡೆಸಿದ್ದರೆ ರೈತರ ಆತ್ಮಹತ್ಯೆ ಪ್ರಕರಣ ಹೆಚ್ಚಾಗುತ್ತಿರಲಿಲ್ಲ ಅಲ್ಲವೇ? ಎಂದು ಪ್ರಶ್ನಿಸಿದೆ.

2013-14 – 104

 2014-15 – 128

2015-16 – 1483

 2016-17 – 1185

2018-19 – 900

ಹೀಗೆ  3800 ಕ್ಕೂ ಅಧಿಕ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರೂ, ಅವರ ಕಣ್ಣೀರು ಒರೆಸುವ ಬದಲು ಟಿಪ್ಪು ಜಯಂತಿ ಆಚರಣೆಯಲ್ಲಿ ನಿರತರಾಗಿದ್ದಿರಿ. ಈಗ ರಾಜಭವನ ಚಲೋ ಎಂಬ ನಾಟಕ, ಚೆನ್ನಾಗಿದೆ! ಎಂದು ಬಿಜೆಪಿ ಟ್ವೀಟ್ ಮಾಡಿದೆ.

ಪ್ರಧಾನಿ ನರೇಂದ್ರ ಮೋದಿ ರೈತರ ಆದಾಯ ದ್ವಿಗುಣಗೊಳಿಸಲು ಕಾನೂನು ತಂದಿದೆ. ರೈತರು ನೇರವಾಗಿ ಮಾರಾಟ ಮಾಡಿದರೆ ಹೆಚ್ಚು ಲಾಭಗಳಿಸುತ್ತಾರೆ ಎಂಬುವುದು ಲೋಕ ಸತ್ಯ. ಆದರೆ ನೀವು ಮಾತ್ರ ಇದನ್ನು ವಿರೋಧಿಸುತ್ತಿದ್ದೀರಿ. ಕಾಂಗ್ರೆಸ್ ನೀವೇಕೆ ದಲ್ಲಾಳಿಗಳ ಪರ ವಕಾಲತ್ತು ವಹಿಸುತ್ತಿದ್ದೀರಿ? ಎಂದು ಬಿಜೆಪಿ ಪ್ರಶ್ನಿಸಿದೆ.

ಇತ್ತೀಚಿನ ಸುದ್ದಿ