ರಜನಿಕಾಂತ್ ಪಕ್ಷ ಸ್ಥಾಪನೆ ಮಾಡಬೇಕು ಎಂದು ಆಗ್ರಹಿಸಿ ಹುಚ್ಚು ಅಭಿಮಾನಿಯಿಂದ ಆತ್ಮಹತ್ಯೆ ಯತ್ನ - Mahanayaka
9:12 PM Wednesday 20 - August 2025

ರಜನಿಕಾಂತ್ ಪಕ್ಷ ಸ್ಥಾಪನೆ ಮಾಡಬೇಕು ಎಂದು ಆಗ್ರಹಿಸಿ ಹುಚ್ಚು ಅಭಿಮಾನಿಯಿಂದ ಆತ್ಮಹತ್ಯೆ ಯತ್ನ

02/01/2021


Provided by

ಚೆನ್ನೈ: ರಜನಿಕಾಂತ್  ರಾಜಕೀಯ ಪ್ರವೇಶಕ್ಕೆ ಒತ್ತಡ ಹೆಚ್ಚಾಗಿದ್ದು, ಅನಾರೋಗ್ಯ ಹಿನ್ನೆಲೆಯಲ್ಲಿ ಪಕ್ಷ ಸ್ಥಾಪನೆಯಿಂದ ಹಿಂದಕ್ಕೆ ಸರಿದಿದ್ದ ರಜನಿಕಾಂತ್ ಅವರ ನಡೆಯಿಂದ ಅಭಿಮಾನಿಗಳಿಗೆ ನಿರಾಸೆಯಾಗಿತ್ತು.

ರಜನಿಕಾಂತ್ ಅವರು ರಾಜಕೀಯ ಪಕ್ಷ ಸ್ಥಾಪನೆ ಮಾಡಬೇಕು ಅಭಿಮಾನಿಗಳು ಅವರ ಮನೆಯ ಮುಂಭಾಗದಲ್ಲಿ ಧರಣಿ ನಡೆಸಿದ್ದು, ಓರ್ವ ಹುಚ್ಚು ಅಭಿಮಾನಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ವಿಧಾನ ಸಭಾ ಚುನಾವಣೆಗೆ ಕೆಲವೇ ತಿಂಗಳು ಇರುವ ಸಂದರ್ಭದಲ್ಲಿ ರಜನಿಕಾಂತ್ ಪಕ್ಷ ಸ್ಥಾಪನೆಗೆ ಒತ್ತಡ ಹೆಚ್ಚಾಗಿದೆ.

ಮನೆಯ ಮುಂದೆ ಅಭಿಮಾನಿ ಆತ್ಮಹತ್ಯೆಗೆ ಯತ್ನಿಸಿದ ಹಿನ್ನೆಲೆಯಲ್ಲಿ  ಅವರ ನಿವಾಸದ ಬಳಿ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ. ಅಭಿಮಾನಿಗಳು ಮನೆ ಎದುರು ಜಮಾಯಿಸಿದಂತೆ ಕ್ರಮಕೈಗೊಳ್ಳಲಾಗಿದೆ.

ಇತ್ತೀಚಿನ ಸುದ್ದಿ