'ಕೋಚಿಂಗ್ ಹಬ್' ನಲ್ಲಿ ಸಾವಿನ ನರ್ತನ: ವಿದ್ಯಾರ್ಥಿಗಳ ಸಾವಿನ ಸಂಖ್ಯೆ 22ಕ್ಕೇರಿಕೆ - Mahanayaka
6:56 PM Tuesday 18 - November 2025

‘ಕೋಚಿಂಗ್ ಹಬ್’ ನಲ್ಲಿ ಸಾವಿನ ನರ್ತನ: ವಿದ್ಯಾರ್ಥಿಗಳ ಸಾವಿನ ಸಂಖ್ಯೆ 22ಕ್ಕೇರಿಕೆ

16/08/2023

‘ಕೋಚಿಂಗ್‌ ಹಬ್‌’ ಎಂದೇ ಹೆಸರು ಪಡೆದಿರುವ ರಾಜಸ್ಥಾನದ ಕೋಟಾದಲ್ಲಿ ವಿದ್ಯಾರ್ಥಿಗಳ ಸಾವಿನ ಸರಣಿ ಮುಂದುವರೆದಿದೆ. ಐಐಟಿ ಆಕಾಂಕ್ಷಿ ಬಿಹಾರ ಮೂಲದ ವಿದ್ಯಾರ್ಥಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಈ ಮೂಲಕ ಕಳೆದ ಎಂಟು ತಿಂಗಳಲ್ಲಿ ವಿದ್ಯಾರ್ಥಿಗಳ ಸಾವಿನ ಸಂಖ್ಯೆ 22ಕ್ಕೆ ಏರಿಕೆಯಾಗಿದೆ.

ಮೃತ ವಿದ್ಯಾರ್ಥಿಯನ್ನ 18 ವರ್ಷದ ವಾಲ್ಮೀಕಿ ಪ್ರಸಾದ್‌ ಎಂದು ಗುರುತಿಸಲಾಗಿದೆ. ಐಐಟಿ ಪ್ರವೇಶ ಪರೀಕ್ಷೆಗೆ ತಯಾರಿ ನಡೆಸಲು 2022ರಲ್ಲಿ ಕೋಟಾಕ್ಕೆ ಬಂದು ನೆಲೆಸಿದ್ದ. ಆಗಸ್ಟ್‌ 15ರಂದು ವಾಲ್ಮೀಕಿ ಪ್ರಸಾದ್‌ ಯಾರಿಗೂ ಕಾಣಿಸದಿದ್ದಾಗ ಹತ್ತಿರದಲ್ಲೇ ವಾಸವಿದ್ದ ಮತ್ತೋರ್ವ ವಿದ್ಯಾರ್ಥಿಯು ವಾಲ್ಮೀಕಿ ವಾಸವಿದ್ದ ಮನೆಯ ಕದ ತಟ್ಟಿದ್ದಾನೆ. ಮನೆಯಿಂದ ಯಾವುದೇ ಪ್ರತಿಕ್ರಿಯೆ ಬಾರದಿದ್ದಾಗ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಮನೆಯ ಬಾಗಿಲು ಮುರಿದು ಪರೀಕ್ಷಿಸಿದಾಗ ನೇಣು ಬಿಗಿದ ಸ್ಥಿತಿಯಲ್ಲಿ ವಿದ್ಯಾರ್ಥಿ ಶವ ಪತ್ತೆಯಾಗಿದೆ. ಈ ಬಗ್ಗೆ ಮಹಾವೀರ ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಮಾಡುತ್ತಿದ್ದಾರೆ.

ಇತ್ತೀಚಿನ ಸುದ್ದಿ