ಕೋರ್ಟ್ ಆದೇಶ, ಪೊಲೀಸ್ ಭದ್ರತೆ ಇದ್ದರೂ ದಲಿತ ಯುವಕನನ್ನು ಮದುವೆಯಾದವಳ ಬರ್ಬರ ಹತ್ಯೆ ನಡೆಯಿತು! - Mahanayaka
11:28 AM Thursday 11 - December 2025

ಕೋರ್ಟ್ ಆದೇಶ, ಪೊಲೀಸ್ ಭದ್ರತೆ ಇದ್ದರೂ ದಲಿತ ಯುವಕನನ್ನು ಮದುವೆಯಾದವಳ ಬರ್ಬರ ಹತ್ಯೆ ನಡೆಯಿತು!

05/03/2021

ಜೈಪುರ: ಜಾತಿ ವ್ಯವಸ್ಥೆಯನ್ನು ಕಾಪಾಡಲು ಏನೆಲ್ಲ ನಡೆಯುತ್ತದೆ ಎನ್ನುವುದಕ್ಕೆ ಈ ಪ್ರಕರಣವೇ ಸಾಕ್ಷಿ. ದಲಿತ ಯುವಕನನ್ನು ವಿವಾಹವಾದ  ಪ್ರತ್ಯೇಕ ಜಾತಿಯ ಯುವತಿಯನ್ನು ಕೋರ್ಟ್, ಪೊಲೀಸರ ಯಾವುದೇ ಭಯವಿಲ್ಲದೇ ಭೀಕರವಾಗಿ ಹತ್ಯೆ ಮಾಡಲಾಗಿದೆ.

ಈ ಘಟನೆ ರಾಜಸ್ಥಾನದಿಂದ ವರದಿಯಾಗಿದ್ದು, ರಾಜಸ್ಥಾನದ ದೌಸ್ವ ಪಟ್ಟಣ ನಿವಾಸಿ ಪಿಂಕಿ ಸೈನಿ ಎನ್ನುವ 18 ವರ್ಷದ ಯುವತಿ 23 ವರ್ಷ ವಯಸ್ಸಿನ ದಲಿತ ಯುವಕ ರೋಶನ್ ಮಹವರ್ ನನ್ನು ಪ್ರೀತಿಸುತ್ತಿದ್ದರು.  ಈ ನಡುವೆ ಪಿಂಕಿಯನ್ನು ಫೆ.16ರಂದು ಪೋಷಕರು ಬಲವಂತವಾಗಿ ಬೇರೆ ಯುವಕನೊಂದಿಗೆ ವಿವಾಹ ಮಾಡಿಸಿದ್ದಾರೆ.

ವಿವಾಹವಾಗಿ 5 ದಿನಗಳಲ್ಲಿಯೇ ಯುವತಿ ತನ್ನ ಪ್ರಿಯತಮ ರೋಶನ್ ಜೊತೆಗೆ ಓಡಿ ಹೋಗಿ  ಮದುವೆಯಾಗಿದ್ದು, ಫೆ.26ರಂದು ರಾಜಸ್ಥಾನದ ಹೈಕೋರ್ಟ್ ಮೊರೆ ಹೋಗಿ ತಮ್ಮನ್ನು ರಕ್ಷಿಸುವಂತೆ ಕೋರಿದ್ದಾರೆ.

ಇವರ ಕೋರಿಕೆಯನ್ನು ಕೇಳಿದ ಹೈಕೋರ್ಟ್,  ಜೋಡಿಗೆ ರಕ್ಷಣೆ ನೀಡಿ, ಅವರ ಇಷ್ಟದ ಪ್ರಕಾರ ಸುರಕ್ಷಿತ ಜಾಗಕ್ಕೆ ಕರೆದೊಯ್ಯುವಂತೆ ಹೇಳಿದೆ. ಜೊತೆಗೆ ಪಾಲಕರಿಗೂ ಯಾವುದೇ ಕಾನೂನು ವಿರೋಧಿ ಕ್ರಮ ತೆಗೆದುಕೊಳ್ಳಂತೆ ಸಲಹೆ ನೀಡಿತ್ತು.

ಇದೇ ಸಂದರ್ಭದಲ್ಲಿ ಮಾರ್ಚ್ 1ರಂದು ದೌಸ ಪಟ್ಟಣದಲ್ಲಿರುವ ರೋಶನ್ ಮನೆಗೆ ಪೊಲೀಸರೊಂದಿಗೆ ಜೋಡಿ ತೆರಳಿದ್ದು, ಅದೇ ದಿನ ಪಿಂಕಿಯ ತಂದೆ ಗುಂಪು ಕಟ್ಟಿಕೊಂಡು ಬಂದು ಪಿಂಕಿಯನ್ನು ಅಪಹರಿಸಿದ್ದು,  ಬಳಿಕ ತನ್ನ ಮನೆಗೆ  ಒಯ್ದು ಮಗಳ ಕತ್ತು ಹಿಸುಕಿ ಹತ್ಯೆ ಮಾಡಿದ್ದಾನೆ.

ಇದೊಂದು ವ್ಯವಸ್ಥಿತವಾಗಿ ನಡೆದ ಕೊಲೆಯಾಗಿದ್ದು, ಯಾವ ಪೊಲೀಸರು, ಯಾವ ವ್ಯವಸ್ಥೆಯೂ ನ್ಯಾಯವನ್ನು ಕಾಪಾಡಲಿಲ್ಲ. ರಕ್ಷಣೆ ನೀಡಬೇಕಾದ ಪೊಲೀಸರು ಮೌನವಾಗಿದ್ದಾರೆ. ಪೊಲೀಸರು ಉದ್ದೇಶ ಪೂರ್ವಕವಾಗಿ ಯುವತಿಯ ಹತ್ಯೆಗೆ ಕಾರಣವಾಗಿದ್ದಾರೆ. ಪೊಲೀಸ್ ವ್ಯವಸ್ಥೆಯೊಳಗೆ ಇಂತಹವರು ಇರುವುದು ನಿಜಕ್ಕೂ, ಪೊಲೀಸ್ ಇಲಾಖೆಯ ಗೌರವಕ್ಕೆ ಧಕ್ಕೆಯಾಗಿದೆ.

whatsapp

ಇತ್ತೀಚಿನ ಸುದ್ದಿ