ರಾಜೀನಾಮೆ ನೀಡಿದ  ಇಬ್ಬರು ಬಿಜೆಪಿ ಶಾಸಕರು | ಕಾರಣ ಏನು ಗೊತ್ತಾ? - Mahanayaka
2:55 AM Tuesday 16 - September 2025

ರಾಜೀನಾಮೆ ನೀಡಿದ  ಇಬ್ಬರು ಬಿಜೆಪಿ ಶಾಸಕರು | ಕಾರಣ ಏನು ಗೊತ್ತಾ?

bjp
13/05/2021

ಕೋಲ್ಕತ್ತ: ಪಶ್ಚಿಮ ಬಂಗಾಳ ವಿಧಾನಸಭೆಯಲ್ಲಿ ಬಿಜೆಪಿ 77 ಸದಸ್ಯ ಬಲವನ್ನು ಹೊಂದಿತ್ತು. ಆದರೆ ಇದೀಗ ಇಬ್ಬರು ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಇದರಿಂದಾಗಿ 75 ಕ್ಕೆ ಸದಸ್ಯ ಬಲ ಇಳಿಕೆಯಾಗಿದೆ.


Provided by

ಪಶ್ಚಿಮ ಬಂಗಾಳದಲ್ಲಿ ಸರ್ಕಾರ ರಚನೆಯ ಕನಸು ಹೊತ್ತಿದ್ದ ಬಿಜೆಪಿ, ಪಕ್ಷದ ಹಾಲಿ ಸಂಸದರಾದ ನಿಶಿತ್ ಪ್ರಾಮಾಣಿಕ್ ಮತ್ತು ಜಗನ್ನಾಥ್ ಅವರನ್ನು  ವಿಧಾನಸಭಾ ಚುನಾವಣೆಯಲ್ಲಿ ಕಣಕ್ಕಿಳಿಸಿತ್ತು. ಅವರು ಗೆಲುವು ಸಾಧಿಸಿದರೂ ಬಿಜೆಪಿಗೆ ಬಹುಮತ ಸಾಬೀತು ಮಾಡಲು ಸಾಧ್ಯವಾಗಲಿಲ್ಲ ಹೀಗಾಗಿ ಬಿಜೆಪಿ ಹೈಕಮಾಂಡ್ ಈ ಇಬ್ಬರು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ಸಂಸದರಾಗಿ ಮುಂದುವರಿಯಲು ಆದೇಶ ನೀಡಿದೆ.

ಪಶ್ಚಿಮ ಬಂಗಾಳದಲ್ಲಿ ಶಾಸಕರಾಗಿ ಆಯ್ಕೆಯಾಗಿದ್ದ ಇಬ್ಬರು ಸಂಸದರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡದೇ ಇದ್ದರೆ, ಅವರು ಸಂಸದರಾಗಿ ಮುಂದುವರಿಯಲು ಸಾಧ್ಯವಾಗುವುದಿಲ್ಲ. ಇತ್ತ ಲೋಕಸಭೆಯಲ್ಲಿ ಕೂಡ ಬಿಜೆಪಿಗೆ ಎರಡು ಸ್ಥಾನ ಕುಸಿತವಾಗುತ್ತದೆ. ಈ ಹಿನ್ನೆಲೆಯಲ್ಲಿ ತಮ್ಮ ಸ್ಥಾನಕ್ಕೆ ಅವರು ರಾಜೀನಾಮೆ ನೀಡಿದ್ದಾರೆ ಎಂದು ಹೇಳಲಾಗಿದೆ.

ಇತ್ತೀಚಿನ ಸುದ್ದಿ