ರಾಜ್ ಕೋಟ್ ಗೇಮಿಂಗ್ ವಲಯದಲ್ಲಿ ಬೆಂಕಿ ಪ್ರಕರಣ: ಸಾವಿನ ಸಂಖ್ಯೆಯಲ್ಲಿ ಹೆಚ್ಚಳ; 14 ಮಕ್ಕಳು ಸೇರಿ 28 ಮಂದಿ ಸಾವು - Mahanayaka
7:55 AM Wednesday 22 - October 2025

ರಾಜ್ ಕೋಟ್ ಗೇಮಿಂಗ್ ವಲಯದಲ್ಲಿ ಬೆಂಕಿ ಪ್ರಕರಣ: ಸಾವಿನ ಸಂಖ್ಯೆಯಲ್ಲಿ ಹೆಚ್ಚಳ; 14 ಮಕ್ಕಳು ಸೇರಿ 28 ಮಂದಿ ಸಾವು

26/05/2024

ಮೇ 25 ರ ಶನಿವಾರ ಗುಜರಾತ್ ನ ರಾಜ್‌ಕೋಟ್ ನ ಗೇಮಿಂಗ್ ಪ್ರದೇಶದಲ್ಲಿ ಸಂಜೆ ದೊಡ್ಡ ಬೆಂಕಿ ಕಾಣಿಸಿಕೊಂಡಿತ್ತು. ರಾಜ್ ಕೋಟ್ ನ ಗೇಮಿಂಗ್ ವಲಯದಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ 14 ಮಕ್ಕಳು ಸೇರಿದಂತೆ ಸಾವನ್ನಪ್ಪಿದವರ ಸಂಖ್ಯೆ 28 ಕ್ಕೆ ತಲುಪಿದೆ. ಇನ್ನೂ ಕೂಡಾ ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ.

ರಾಜ್ ಕೋಟ್ ಗೇಮ್ ಝೋನ್ ಮ್ಯಾನೇಜರ್ ನಿತಿನ್ ಜೈನ್ ಮತ್ತು ಗೇಮ್ ಜೋನ್ ಪಾಲುದಾರ ಯುವರಾಜ್ ಸಿಂಗ್ ಸೋಲಂಕಿ ಅವರನ್ನು ಪೊಲೀಸರು ಬಂಧಿಸಿದ್ದಾರೆ. ರಾಜ್ ಕೋಟ್ ಪೊಲೀಸ್ ಆಯುಕ್ತ ರಾಜು ಭಾರ್ಗವ ಈ ಬಗ್ಗೆ ಪ್ರತಿಕ್ರಿಯಿಸಿದ್ದು, “ಪೊಲೀಸ್ ತನಿಖೆ ನಡೆಯುತ್ತಿದೆ. ಟಿಆರ್ ಪಿ ಆಟದ ವಲಯದ ಮಾಲೀಕರು ಮತ್ತು ವ್ಯವಸ್ಥಾಪಕರನ್ನು ವಿಚಾರಣೆಗಾಗಿ ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿದೆ” ಎಂದಿದ್ದಾರೆ.
ಅಗ್ನಿ ದುರಂತದ ತನಿಖೆಗಾಗಿ ವಿಶೇಷ ತನಿಖಾ ತಂಡವನ್ನು (ಎಸ್ಐಟಿ) ರಚಿಸಲಾಗಿದ್ದು, ಕಳೆದ ರಾತ್ರಿ ತನಿಖೆ ಪ್ರಾರಂಭವಾಗಿದೆ.

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ