‘ಬ್ರಾಹ್ಮಣ ಧರ್ಮ’ ಅನ್ನೋ ನರಕದಿಂದ ನಾನು ಹೊರ ಬಂದೆ: ರಾಜರತ್ನ ಅಂಬೇಡ್ಕರ್ - Mahanayaka
7:58 AM Wednesday 17 - September 2025

‘ಬ್ರಾಹ್ಮಣ ಧರ್ಮ’ ಅನ್ನೋ ನರಕದಿಂದ ನಾನು ಹೊರ ಬಂದೆ: ರಾಜರತ್ನ ಅಂಬೇಡ್ಕರ್

rajratna ambedkar
09/10/2022

ನವದೆಹಲಿ: ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಮೊಮ್ಮಗ ರಾಜರತ್ನ ಅಂಬೇಡ್ಕರ್ ಅವರು, ಬೌದ್ಧ ಧರ್ಮ ಸ್ವೀಕರಿಸಿದ್ದು, ಧಮ್ಮ ಸ್ವೀಕರಿಸಿದ ಬಳಿಕ ಅವರು, ‘ಬ್ರಾಹ್ಮಣ ಧರ್ಮ’ ಅನ್ನೋ ನರಕದಿಂದ ನಾನು ಹೊರ ಬಂದೆ ಎಂದು ಬಣ್ಣಿಸಿದರು.


Provided by

ಬೌದ್ಧ ಧರ್ಮದಲ್ಲಿ ಸ್ವರ್ಗ ಹಾಗೂ ನರಕ  ಅನ್ನೋ ಪರಿಕಲ್ಪನೆ ಇಲ್ಲ. ಆ ರೀತಿಯ ಪರಿಕಲ್ಪನೆ ಇದ್ದಿದ್ದರೆ ಅದು ಬ್ರಾಹ್ಮಣ ಧರ್ಮವಾಗುತ್ತಿತ್ತು. ನಾವು ಇಂದು 33 ಕೋಟಿ ದೇವರು ಮತ್ತು ದೇವತೆಗಳ ಹಿಂದೆ ಇದ್ದೇವೆ. ಆದರೆ ಅವರು, ನಮ್ಮ ಚಿನ್ನದ ಬುದ್ಧನೊಂದಿಗೆ ತಿರುಗಾಡುತ್ತಿದ್ದಾರೆ ಎಂದು ರಾಜರತ್ನ ಹೇಳಿದರು.

ನಿತಿನ್ ಗಡ್ಕರಿ, ನರೇಂದ್ರ ಮೋದಿ ಮತ್ತು ಪೇಶ್ವೆ ಬ್ರಾಹ್ಮಣ ದೇವೇಂದ್ರ ಪಡ್ನವಿಸ್ ಅವರು ಅಂಬೇಡ್ಕರ್ ಗುರುತನ್ನು ಹೈಜಾಕ್ ಮಾಡಿದ್ದಾರೆ. ಮತ್ತು ಜಗತ್ತಿಗೆ ತಮ್ಮನ್ನು ಬೌದ್ಧರು ಎಂದು ತೋರಿಸಿಕೊಳ್ಳುತ್ತಿದ್ದಾರೆ. ಯೋಗಿ ಆದಿತ್ಯನಾಥ್ ಅವರು, ದೇಶದ ಅತೀ ಹೆಚ್ಚು ಜನಸಂಖ್ಯೆಯ ರಾಜ್ಯದ ಮುಖ್ಯಮಂತ್ರಿಯಾದ ಬೌದ್ಧ ಸನ್ಯಾಸಿ ಎಂದು ಜಗತ್ತಿನ ದಾರಿ ತಪ್ಪಿಸುತ್ತಿದ್ದಾರೆ ಎಂದು ಅವರು ಆರೋಪಿಸಿದರು.

ಅವರು ನಮ್ಮನ್ನು ಭಯ ಮತ್ತು ಬೆದರಿಕೆಯಿಂದ ಹಿಂದೂ ಧರ್ಮದಲ್ಲಿ ಸಿಲುಕಿಸಿದ್ದಾರೆ. ಸಾರ್ವಜನಿಕವಾಗಿ ಬೌದ್ಧ ಧರ್ಮವನ್ನು ಸ್ವೀಕರಿಸಲು ನಾವು ಜನರನ್ನು ಪ್ರೋತ್ಸಾಹಿಸಬೇಕು. ಆಗ ಮಾತ್ರ ನಾವು ಅಂಬೇಡ್ಕರ್ ಅವರ ಋಣವನ್ನು ತೀರಿಸಲು ಸಾಧ್ಯ ಎಂದರು.

ಮೋದಿ ಸರ್ಕಾರವು ಖಾಸಗಿಕರಣಗೊಳಿಸುವ ಮೂಲಕ ಜಾತಿ ಆಧಾರಿತ ಮೀಸಲಾತಿಗಳನ್ನು ತೆಗೆದು ಹಾಕುತ್ತಿದೆ. ಮೀಸಲಾತಿ ಹೋಗುತ್ತದೆ ಅನ್ನೋ ಭಯದಿಂದ ಶೋಷಿತ ಜನರು ಬೌದ್ಧ ಧರ್ಮಕ್ಕೆ ಮರಳಲು ಭಯಪಡುತ್ತಿದ್ದಾರೆ. ಸರ್ಕಾರವು ಮೀಸಲಾತಿ ಆಧಾರಿತ ಉದ್ಯೋಗಗಳನ್ನು ಸಂಪೂರ್ಣವಾಗಿ ಕಸಿದುಕೊಳ್ಳಲಿದೆ. ಹಾಗಾಗಿ ಬೌದ್ಧ ಧರ್ಮಕ್ಕೆ ಮರಳುವ ಮೂಲಕ ದೇಶದಲ್ಲಿ ಧಾರ್ಮಿಕ ಅಲ್ಪ ಸಂಖ್ಯಾತರಿಗೆ ಸರ್ಕಾರ ನೀಡುವ ಪ್ರಯೋಜನಗಳನ್ನು ಪಡೆಯುವುದು ನಮಗಿರುವ ಏಕೈಕ ಭರವಸೆ ಎಂದು ಅವರು ಹೇಳಿದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ