ತಾಲೂಕು ಮಟ್ಟದಿಂದ, ರಾಜ್ಯಮಟ್ಟದಲ್ಲಿ ಹಣ ಮಾಡಲು ಯೋಗೇಶ್ವರ್ ಗೆ ಅಧಿಕಾರ ನೀಡಿದ್ದಾರೆ | ಕುಮಾರಸ್ವಾಮಿ - Mahanayaka

ತಾಲೂಕು ಮಟ್ಟದಿಂದ, ರಾಜ್ಯಮಟ್ಟದಲ್ಲಿ ಹಣ ಮಾಡಲು ಯೋಗೇಶ್ವರ್ ಗೆ ಅಧಿಕಾರ ನೀಡಿದ್ದಾರೆ | ಕುಮಾರಸ್ವಾಮಿ

19/01/2021


Provided by

ರಾಮನಗರ:  ಸಿ.ಪಿ.ಯೋಗೇಶ್ವರ್ ತಾಲೂಕು ಮಟ್ಟದಲ್ಲಿ ಹಣ ಮಾಡುತ್ತಿದ್ದರು. ಈಗ ರಾಜ್ಯಮಟ್ಟದಲ್ಲಿ ಹಣ ಮಾಡಲು ಅವರಿಗೆ ಅಧಿಕಾರ ನೀಡಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಸಿ.ಪಿ.ಯೋಗೇಶ್ವರ್ ಅವರಿಗೆ ಟಾಂಗ್ ನೀಡಿದ್ದಾರೆ.

ಸಿ.ಪಿ.ಯೋಗೇಶ್ವರ್ ಈಗ ಮಂತ್ರಿಯಾಗಿದ್ದಾರೆ. ಪೊಗದಸ್ತಾಗಿ ಕೆಲಸ ಮಾಡಲು ಅವರಿಗೆ ಅನುಕೂಲವಾಯಿತು ಎಂದು ಪರೋಕ್ಷವಾಗಿಯೂ ಟಾಂಗ್ ನೀಡಿದ ಕುಮಾರಸ್ವಾಮಿ, ಪ್ರಾಮಾಣಿಕ ಅಧಿಕಾರಿಗಳ ಮೂಲಕ ಅವರು ಕೆಲಸ ಮಾಡಲಿ, ಹೆಸರು ಪಡೆಯಲಿ ಎಂದು ಅವರು ಹೇಳಿದರು.

ನಾನು ರಾಜಕರಣಕ್ಕೆ ಬಂದಾಗಿನಿಂದ ಮಂತ್ರಿಗಳನ್ನು ನೋಡಿದ್ದೇನೆ. ಮಂತ್ರಿಗೆ ಏನು ಕೊಂಬು ಇರುತ್ತಾ? ಅಧಿಕಾರ ಬಂದಾಗ ಬಡವರ ಬಗ್ಗೆ ಚಿಂತನೆ ಮಾಡಲಿ. ಬಡವರ ಪರವಾಗಿ ಕೆಲಸ ಮಾಡಲಿ ಎಂದು ಕುಮಾರಸ್ವಾಮಿ ಹೇಳಿದರು.

ಇತ್ತೀಚಿನ ಸುದ್ದಿ