ರಾಜ್ಯದಲ್ಲಿ ಮತ್ತೊಂದು ಭೀಕರ ಸ್ಫೋಟ:  300 ಮೀ. ದೂರ ಹಾರಿ ಬಿದ್ದ ವ್ಯಕ್ತಿಯ ಮೃತದೇಹ! - Mahanayaka

ರಾಜ್ಯದಲ್ಲಿ ಮತ್ತೊಂದು ಭೀಕರ ಸ್ಫೋಟ:  300 ಮೀ. ದೂರ ಹಾರಿ ಬಿದ್ದ ವ್ಯಕ್ತಿಯ ಮೃತದೇಹ!

jiletin
04/04/2021


Provided by

ಹಾಸನ: ಶಿವಮೊಗ್ಗ ಹಾಗೂ ಚಿಕ್ಕಬಳ್ಳಾಪುರದಲ್ಲಿ ಕಲ್ಲು ಗಣಿಗಾರಿಕೆ ಪ್ರದೇಶದಲ್ಲಿ ಜಿಲೆಟಿನ್ ಕಡ್ಡಿ ಸ್ಪೋಟಗೊಂಡು ಹಲವರು ಸಾವನ್ನಪ್ಪಿದ ಘಟನೆಗಳು ಮರೆಯಾಗುವ ಮೊದಲೇ ಹಾಸನದಲ್ಲಿ ಮತ್ತೊಂದು ಭೀಕರ ಸ್ಫೋಟ ನಡೆದಿದ್ದು, ಓರ್ವ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.

ಹಾಸನ ಜಿಲ್ಲೆಯ ಚಾಕೇನಹಳ್ಳಿಯಲ್ಲಿ ಮತ್ತೊಂದು ಜಿಲೆಟಿನ್ ಸ್ಪೋಟ ನಡೆದಿದ್ದು, ಓರ್ವ ಸ್ಥಳದಲ್ಲಿಯೇ ಸಾವನ್ನಪ್ಪಿ, ಇನ್ನಿಬ್ಬರ ಸ್ಥಿತಿ ಗಂಭೀರವಾಗಿದೆ.  ಗ್ರಾಮದ ಸಮೀಪವೇ ಸ್ಫೋಟಕಗಳ ಗೋಡೋನ್ ಇದ್ದು, ಸ್ಫೋಟದ ತೀವ್ರತೆಗೆ ವ್ಯಕ್ತಿಯ ಮೃತದೇಹ ಮನ್ನೂರು ಮೀಟರ್ ದೂರಕ್ಕೆ ಎಸೆಯಲ್ಪಟ್ಟಿದೆ.

27 ವರ್ಷ ವಯಸ್ಸಿನ ಸಂಪತ್ ಮೃತಪಟ್ಟ ಯುವಕನೆಂದು ಗುರುತಿಸಲಾಗಿದೆ. ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ, ಪೊಲೀಸರು ಆಗಮಿಸಿದ್ದು, ಗೋಡಾನ್ ನಲ್ಲಿ ಜಿಲೆಟಿನ್ ಕಡ್ಡಿ ಇತರ ಸ್ಫೋಟಕ ವಸ್ತುಗಳು ತುಂಬಿದ್ದವು ಎಂದು ಹೇಳಲಾಗಿದೆ.

ಚಾಕೇನಹಳ್ಳಿಕಟ್ಟೆ ಸುತ್ತ ಅಕ್ರಮವಾಗಿ ಸ್ಫೋಟಕ ಸಂಗ್ರಹಿಸಿರುವ ಬಗ್ಗೆ ಜಿಲ್ಲಾಡಳಿತದ ಗಮನಕ್ಕೆ ಸಾರ್ವಜನಿಕರು ತಂದಿದ್ದರೂ ಜಿಲ್ಲಾಡಳಿತ ನಿರ್ಲಕ್ಷ್ಯವಹಿಸಿತ್ತು ಎನ್ನುವ ಆರೋಪಗಳು ಕೂಡ ಇದೀಗ ಕೇಳಿ ಬಂದಿದೆ.

ಇತ್ತೀಚಿನ ಸುದ್ದಿ