ರಾಮಮಂದಿರ ಉದ್ಘಾಟನೆ ಹಿನ್ನೆಲೆ: ಪೆಟ್ರೋಲ್ ಬಂಕ್ ನಲ್ಲಿ ಸಿಹಿ ತಿಂಡಿ ವಿತರಣೆ

22/01/2024
ಕೊಟ್ಟಿಗೆಹಾರ: ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆ ಹಿನ್ನೆಲೆಯಲ್ಲಿ ಕೊಟ್ಟಿಗೆಹಾರದ ದುರ್ಗಾಂಬ ಪೆಟ್ರೋಲ್ ಬಂಕ್ ನಲ್ಲಿ ಗ್ರಾಹಕರಿಗೆ ಹಾಗೂ ಸಾರ್ವಜನಿಕರಿಗೆ ಸಿಹಿಯನ್ನು ವಿತರಿಸಲಾಯಿತು.
ಪೆಟ್ರೋಲ್ ಬಂಕ್ ನ ವ್ಯವಸ್ಥಾಪಕ ಶರತ್ ಸುದ್ದಿಗಾರರೊಂದಿಗೆ ಮಾತನಾಡಿ, ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಉದ್ಘಾಟನೆ ಆಗುತ್ತಿರುವುದು ದೇಶದ ಹೆಮ್ಮೆಯ ಪ್ರತಿಕ ಆದ್ದರಿಂದ ನಮ್ಮ ಗ್ರಾಹಕರಿಗೆ ಹಾಗೂ ಸಾರ್ವಜನಿಕರಿಗೆ ಬೆಳಗಿನಿಂದ ಸಂಜೆವರೆಗೂ ಸಿಹಿಯನ್ನು ವಿತರಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಶರತ್ ಪ್ರಕಾಶ್ ಅನ್ವಿತ್ ಸುದೀಪ್ ಸುಮಂತ್ ದಿವ್ಯ ಕಾರ್ತಿಕ್ ವಿಜ್ಞೇಶ್ ಮೊದಲಾದವರಿದ್ದರು.