ರಾಮಮಂದಿರಕ್ಕೆ 1 ಪೈಸೆನೂ ಕೊಡಬೇಡಿ:  ಪಿಎಫ್ ಐ ಮುಖಂಡ ಅನೀಸ್ ಅಹ್ಮದ್ - Mahanayaka
12:34 PM Wednesday 10 - December 2025

ರಾಮಮಂದಿರಕ್ಕೆ 1 ಪೈಸೆನೂ ಕೊಡಬೇಡಿ:  ಪಿಎಫ್ ಐ ಮುಖಂಡ ಅನೀಸ್ ಅಹ್ಮದ್

19/02/2021

ಮಂಗಳೂರು:  ರಾಮಮಂದಿರ ನಿರ್ಮಾಣಕ್ಕೆ ಒಂದು ಪೈಸೆಯೂ ಕೊಡಬೇಡಿ ಎಂದು ಮುಸ್ಲಿಮರಿಗೆ  ಪಿಎಫ್ ಐ ಪ್ರಧಾನ ಕಾರ್ಯದರ್ಶಿ ಅನೀಸ್ ಅಹ್ಮದ್ ಹೇಳಿದ್ದು, ನಿಮ್ಮ ಮನೆಗೆ ಚಂದಾ ಸಂಗ್ರಹಕ್ಕೆ ಬಂದರೆ ಹಣ ನೀಡಬೇಡಿ ಎಂದು ಹೇಳಿದ್ದಾರೆ.

ನಗರದ ಉಳ್ಳಾಲದಲ್ಲಿ ಮಾತನಾಡಿದ ಅವರು, ಅದು ರಾಮಮಂದಿರ ಅಲ್ಲ. ಅದು ಆರೆಸ್ಸೆಸ್ ಮಂದಿರ. ಪಿಎಫ್ ಐನ ಶತ್ರು ಎಂದಿದ್ದರೆ ಅದು ಆರೆಸ್ಸೆಸ್ ಮಾತ್ರ ಅವರು ಹೇಳಿದರು.

ದೇಶದಲ್ಲಿ ಹಿಂದೂ v/s ಮುಸ್ಲಿಮ್ ಅಲ್ಲ, ಮುಸ್ಲಿಮ್ v/s ಆರೆಸ್ಸೆಸ್ ಎನ್ನುವ ಸ್ಥಿತಿ ಇದೆ.  ದೇಶದಲ್ಲಿ ಶಾಂತಿ ಸ್ಥಾಪನೆಯಾಗಬೇಕಾದರೆ ಮಸೀದಿಯ ಜಾಗ ಬಿಟ್ಟು ಕೊಡಿ ಎಂದು ಹೇಳಿದರು. ಆದರೆ ಮಸೀದಿಯ ಜಾಗ ಬಿಟ್ಟುಕೊಟ್ಟ ಮೇಲೆ ದೇಶದಲ್ಲಿ ಶಾಂತಿ ಸ್ಥಾಪನೆ ಆಯ್ತಾ? ಈಗಲೂ ಮುಸ್ಲಿಮರ ಮೇಲೆ ದೌರ್ಜನ್ಯ ನಡೆಯುತ್ತಲೇ ಇದೆ ಎಂದು ಅವರು ಹೇಳಿದರು.

ಇತ್ತೀಚಿನ ಸುದ್ದಿ