ರಮೇಶ್ ಜಾರಕಿಗೊಳಿ ರಾಜೀನಾಮೆ ನೀಡಿದಾಗ ನಾನು ಕಣ್ಣೀರು ಹಾಕಿದೆ | ರೇಣುಕಾಚಾರ್ಯ - Mahanayaka
11:15 AM Sunday 14 - December 2025

ರಮೇಶ್ ಜಾರಕಿಗೊಳಿ ರಾಜೀನಾಮೆ ನೀಡಿದಾಗ ನಾನು ಕಣ್ಣೀರು ಹಾಕಿದೆ | ರೇಣುಕಾಚಾರ್ಯ

04/03/2021

ಬೆಂಗಳೂರು: ರಮೇಶ್ ಜಾರಕಿಹೊಳಿ ರಾಜೀನಾಮೆ ನೀಡಿದಾಗ ನಾನು ಕಣ್ಣೀರು ಹಾಕಿದ್ದೆ. ಅವರ ಪ್ರಕರಣ ನನಗೆ ಬಹಳ ನೋವು ತಂದಿದೆ ಎಂದು ಶಾಸಕ ರೇಣುಕಾಚಾರ್ಯ ಹೇಳಿದ್ದಾರೆ.

ರಮೇಶ್ ಜಾರಕಿಹೊಳಿ ರಾಜೀನಾಮೆಯ ಕುರಿತು ಮಾತನಾಡಿದ ಅವರು,  ರಮೇಶ್ ಜಾರಕಿಹೊಳಿ ಬಹಳ ಒಳ್ಳೆಯ ಮನುಷ್ಯ.ಅವರ ಮನೆಯವರ ಪರಿಸ್ಥಿತಿ ನೆನಪಿಸಿಕೊಂಡರೆ ನನಗೆ ನೋವಾಗುತ್ತದೆ ಎಂದು ಅವರು ಬೇಸರ ಹೊರ ಹಾಕಿದರು.

ಹುಡುಗಿ ಬಂದು ದೂರು ಕೊಟ್ಟಿಲ್ಲ. ಹಾಗಾಗಿ ರಮೇಶ್ ಜಾರಕಿಹೊಳಿಯನ್ನು ಆರೋಪಿ ಎಂದು ನಾನು ಹೇಳುವುದಿಲ್ಲ. ಇನ್ನೂ ಎಷ್ಟು ಸಿಡಿಗಳಿವೆ ಎನ್ನುವುದರ ಬಗ್ಗೆ ನನಗೆ ತಿಳಿದಿಲ್ಲ. ನಾನು ಬ್ಯುಸಿ ಇದ್ದ ಕಾರಣ ವಿಡಿಯೋಗಳನ್ನು ಸರಿಯಾಗಿ ನೋಡಲು ಸಾಧ್ಯವಾಗಲಿಲ್ಲ. ಆದರೆ ಈ ವಿಡಿಯೊಗಳು ನಕಲಿ ಎಂದು ರಮೇಶ್ ಹೇಳಿದ್ದಾರೆ ಎಂದು ಅವರು ಹೇಳಿದರು

whatsapp

ಇತ್ತೀಚಿನ ಸುದ್ದಿ