ರಮಝಾನ್‌ ಉಪವಾಸ ತಿಂಗಳ ಪ್ರಥಮ ಚಂದ್ರದರ್ಶನ | ಗುರುವಾರದಿಂದ ಉಪವಾಸ ಆಚರಣೆ - Mahanayaka
2:06 PM Tuesday 11 - November 2025

ರಮಝಾನ್‌ ಉಪವಾಸ ತಿಂಗಳ ಪ್ರಥಮ ಚಂದ್ರದರ್ಶನ | ಗುರುವಾರದಿಂದ ಉಪವಾಸ ಆಚರಣೆ

22/03/2023

ಮುಸ್ಲಿಮರ ಪವಿತ್ರ ರಮಝಾನ್‌ ಉಪವಾಸ ತಿಂಗಳ ಪ್ರಥಮ ಚಂದ್ರದರ್ಶನವು ಇಂದು ಕೇರಳದ ಕಲ್ಲಿಕೋಟೆಯ ಕಾಪಾಡ್ ಎಂಬಲ್ಲಿ ಆಗಿದೆ.

ಈ ಹಿನ್ನೆಲೆಯಲ್ಲಿ ಗುರುವಾರದಿಂದ ರಂಝಾನ್ ಉಪವಾಸ ಆಚರಿಸಲು ದಕ್ಷಿಣ ಕನ್ನಡ ಜಿಲ್ಲಾ ಖಾಝಿ ತ್ವಾಕಾ ಅಹ್ಮದ್ ಮುಸ್ಲಿಯಾರ್ ಪರವಾಗಿ ಕೇಂದ್ರ ಜುಮಾ ಮಸೀದಿಯ ಖತೀಬ್ ಹಾಜಿ ಅಬುಲ್ ಅಕ್ರಂ ಮುಹಮ್ಮದ್ ಬಾಖವಿ ಮತ್ತು ಉಡುಪಿ, ಹಾಸನ, ಚಿಕ್ಕಮಗಳೂರು ಜಿಲ್ಲೆಗಳ ಸಂಯುಕ್ತ ಖಾಝಿ ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ ಹಾಗೂ ಉಳ್ಳಾಲ ಖಾಝಿ ಸೈಯದ್ ಫಝಲ್ ಕೋಯಮ್ಮ ತಂಙಳ್ ಅಲ್ ಬುಖಾರಿ ಹಾಗೂ ಭಟ್ಕಳ ಚಂದ್ರದರ್ಶನ ಸಮಿತಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಇತ್ತೀಚಿನ ಸುದ್ದಿ