ಬಾಕ್ಸ್ ಆಫೀಸ್ ನಲ್ಲಿ ಮಕಾಡೆ ಮಲಗಿದ 'ಸಾವರ್ಕರ್' ಸಿನಿಮಾ: ಥಿಯೇಟರ್ ಗಳಲ್ಲಿ ಪ್ಲಾಪ್ ಶೋ - Mahanayaka

ಬಾಕ್ಸ್ ಆಫೀಸ್ ನಲ್ಲಿ ಮಕಾಡೆ ಮಲಗಿದ ‘ಸಾವರ್ಕರ್’ ಸಿನಿಮಾ: ಥಿಯೇಟರ್ ಗಳಲ್ಲಿ ಪ್ಲಾಪ್ ಶೋ

29/03/2024


Provided by

ಬಾಲಿವುಡ್ ನಟ ರಣದೀಪ್ ಹೂಡಾ ನಟಿಸಿ ನಿರ್ದೇಶಿಸಿರುವ ‘ಸ್ವಾತಂತ್ರ ವೀರ ಸಾವರ್ಕರ್’ ಎಂಬ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಸಂಪೂರ್ಣ ನೆಲಕಚ್ಚಿದೆ ಎಂಬ ಮಾಹಿತಿ ಹೊರ ಬಿದ್ದಿದೆ. ಮಾರ್ಚ್ 22ರಂದು ಬಿಡುಗಡೆಯಾದ ಈ ಸಿನಿಮಾ ಈವರೆಗೆ 11 ಕೋಟಿ ರೂಪಾಯಿಯನ್ನಷ್ಟೇ ಗಳಿಸಿದ್ದು ಮುಂದಿನ ವಾರ ಥಿಯೇಟರ್ ನಲ್ಲಿ ಉಳಿಯುವ ಸಾಧ್ಯತೆ ಇಲ್ಲ ಎಂದು ವರದಿಯಾಗಿದೆ. ಸಾವರ್ಕರ್ ರನ್ನು ವೈಭವೀಕರಿಸುವ ಸಿನಿಮಾವಾಗಿ ಬಾರಿ ಪ್ರಚಾರ ಪಡದಿದ್ದ ಈ ಸಿನಿಮಾ ಇದೀಗ ತೋಫೆದ್ದು ಹೋಗಿರುವುದು ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಗೆ ಒಳಗಾಗುತ್ತಿದೆ.

ಮರಾಠಿ ಮತ್ತು ಹಿಂದಿ ಭಾಷೆಯಲ್ಲಿ ನಿರ್ಮಾಣವಾಗಿರುವ ಈ ಸಿನಿಮಾದ ಬಗ್ಗೆ ಬಲಪಂಥೀಯ ಮಾಧ್ಯಮಗಳು ಸಾಕಷ್ಟು ಪ್ರಚಾರ ನಡೆಸಿದ್ದವು. ಮಹಾತ್ಮ ಗಾಂಧಿಯವರನ್ನು ತಪ್ಪಿತಸ್ತ ನಂತೆ ಬಿಂಬಿಸುವುದು ಮತ್ತು ಸಾವರ್ಕರ್ ಅವರ ವ್ಯಕ್ತಿತ್ವವನ್ನು ವೈಭವೀಕರಿಸುವುದು ಇದರ ಮುಖ್ಯ ಉದ್ದೇಶವಾಗಿದೆ ಎಂಬ ಮಾತುಗಳನ್ನು ವೀಕ್ಷಕರು ವ್ಯಕ್ತಪಡಿಸಿದ್ದರು. ಇದೇ ವೇಳೆ ಸಾವರ್ಕರ್ ಕ್ಷಮೆ ಯಾಚಿಸಿಲ್ಲ ಎಂದು ಹೇಳಿದ್ದ ರಣದೀಪ ಹೂಡ ಅವರು ಪತ್ರವನ್ನು ಮಾತ್ರ ಬರೆದಿದ್ದರು ಎಂದು ವಾದಿಸಿದ್ದರು. ಹಾಗೆಯೇ ಸ್ವಾತಂತ್ರ್ಯ ಸೇನಾನಿಗಳಾದ ಸುಭಾಷ್ ಚಂದ್ರ ಬೋಸ್ ಭಗತ್ ಸಿಂಗ್ ಖುದಿರಾಮ್ ಬೋಸ್ ಮುಂತಾದವರು ಸಾವರ್ಕರ್ ಅವರಿಂದ ಪ್ರೇರಣೆ ಪಡೆದಿದ್ದರು ಎಂಬ ರಣಧೀಪ್ ಹೂಡಾ ಮಾತಿಗೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ವಿರೋಧ ವ್ಯಕ್ತವಾಗಿತ್ತು.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ