ರಾಣಿ ಝರಿಯಲ್ಲಿ ಬೈಕ್ ರೈಡರ್ ಗಳ ಹುಚ್ಚಾಟ!: ಕೆಸರು ಗದ್ದೆಯಾದ ರಸ್ತೆ - Mahanayaka

ರಾಣಿ ಝರಿಯಲ್ಲಿ ಬೈಕ್ ರೈಡರ್ ಗಳ ಹುಚ್ಚಾಟ!: ಕೆಸರು ಗದ್ದೆಯಾದ ರಸ್ತೆ

mudigere
15/07/2024


Provided by

ಮೂಡಿಗೆರೆ: ತಾಲೂಕಿನ ರಾಣಿಝರಿಗೆ ಸಾಗುವ ರಸ್ತೆಯಲ್ಲಿ ಬೈಕ್ ರೈಡರ್ ಗಳ ಹುಚ್ಚಾಟಕ್ಕೆ ಪ್ರವಾಸಿಗರು ಭಾನುವಾರ  ಬೇಸತ್ತು ಹೋದ ಘಟನೆ ನಡೆದಿದೆ.

ಉಜಿರೆ ಮೂಲದ ಐದಾರು ಜನ ಯುವಕರು ಮೊದಲೇ‌ ಕೆಸರುಮಯವಾಗಿದ್ದ ರಸ್ತೆಯಲ್ಲಿ ರೀಲ್ಸ್ ಹುಚ್ಚಿಗೆ 50 ಕ್ಕೂ ಹೆಚ್ಚು ಬಾರಿ ಕುಡಿದ ಮತ್ತಿನಲ್ಲಿ ಯುವಕರು ಬೈಕ್ ವ್ಹೀಲಿಂಗ್ ಮಾಡಿದ ಪರಿಣಾಮ ರಸ್ತೆಯೇ ಹದೆಗೆಟ್ಟು ಹೋಗಿದೆ.

ಅರ್ಧಗಂಟೆಗೂ ಹೆಚ್ಚು ಕಾಲ ಯುವಕರು ಹುಚ್ಚಾಟ ನಡೆಸಿದರೂ ಸಹ ಇಲ್ಲಿ ಹೇಳೋಳುವವರಿಲ್ಲ ಕೇಳೋರಿಲ್ಲ ಎಂಬಾಂತಾಗಿತ್ತು.

ಮಣ್ಣಿನ ರಸ್ತೆಯಲ್ಲಿ ವ್ಹೀಲಿಂಗ್ ಮಾಡುತ್ತಾ ಅತ್ತಿಂದಿತ್ತ ಬೈಕ್ ನಲ್ಲಿ ಹೋಗುತ್ತಿದ್ದ ಪರಿಣಾಮ ರಸ್ತೆ ಕೆಸರು ಗದ್ದೆಯಂತೆ ಮಾರ್ಪಟ್ಟಿದೆ.  ಯುವಕರ ಹುಚ್ಚಾಟವನ್ನು ಸಂತೋಷ್ ಅತ್ತಿಗೆರೆ ಪೋಟೋಗಳ ಮೂಲಕ ಸೆರೆ ಹಿಡಿದಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

ಇತ್ತೀಚಿನ ಸುದ್ದಿ