ಮಹಿಳೆಗೆ ಕಪಾಳಮೋಕ್ಷ ಮಾಡಿದ ರ‍್ಯಾಪಿಡೋ ಬೈಕ್ ಟ್ಯಾಕ್ಸಿ ಚಾಲಕ: ವಿಡಿಯೋದ ಅಸಲಿಯತ್ತು ಬಯಲು! - Mahanayaka

ಮಹಿಳೆಗೆ ಕಪಾಳಮೋಕ್ಷ ಮಾಡಿದ ರ‍್ಯಾಪಿಡೋ ಬೈಕ್ ಟ್ಯಾಕ್ಸಿ ಚಾಲಕ: ವಿಡಿಯೋದ ಅಸಲಿಯತ್ತು ಬಯಲು!

rapido
16/06/2025

ಬೆಂಗಳೂರು: ರ‍್ಯಾಪಿಡೋ ಬೈಕ್ ಟ್ಯಾಕ್ಸಿ ಚಾಲಕನೊಬ್ಬ ಮಹಿಳೆಗೆ ಹಲ್ಲೆ ನಡೆಸಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಆದ್ರೆ ಇದೀಗ ಘಟನೆ ಸಂಬಂಧ ಜಯನಗರ ಪೊಲೀಸ್​ ಠಾಣೆಯಲ್ಲಿ ರ‍್ಯಾಪಿಡೋ ಬೈಕ್ ಟ್ಯಾಕ್ಸಿ ಚಾಲಕನ ವಿರುದ್ಧ  ಪ್ರಕರಣ ದಾಖಲಾಗುತ್ತಿದ್ದಂತೆಯೇ ಹಲ್ಲೆಗೊಳಗಾದ ಮಹಿಳೆಯ ಅಸಲಿಯತ್ತು ಬಯಲಾಗಿದೆ.

ಜೂನ್ 14ರಂದು ಈ ಘಟನೆ ನಡೆದಿತ್ತು. ರ‍್ಯಾಪಿಡೋ ಬೈಕ್ ಟ್ಯಾಕ್ಸಿ ಚಾಲಕ ಮಹಿಳಾ ಪ್ರಯಾಣಿಕರ ಮೇಲೆ ಹಲ್ಲೆ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆದ ಬೆನ್ನಲ್ಲೇ ಚಾಲಕನ ವಿರುದ್ಧ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು.

ಯುವತಿ ಶ್ರೇಯಾ ಬಿಟಿಎಂ ಲೇಔಟ್‌ ನಿಂದ ಜಯನಗರ 3ನೇ ಬ್ಲಾಕ್ ಗೆ ರ‍್ಯಾಪಿಡೋ ಬೈಕ್ ಟ್ಯಾಕ್ಸಿ ಬುಕ್​ ಮಾಡಿದ್ದರು. ರ‍್ಯಾಪಿಡೋ ಬೈಕ್ ಟ್ಯಾಕ್ಸಿ ಚಾಲಕ ಸುಹಾಸ್​ ಪಿಕಪ್ ಮಾಡಿಕೊಂಡು ಲೋಕೆಶನ್​ ಗೆ ಬಿಟ್ಟಿದ್ದಾರೆ.

ಇದೇ ವೇಳೆ ಶ್ರೇಯಾ ಸಂಚಾರಿ ನಿಯಮದ ವಿಚಾರದಲ್ಲಿ ಚಾಲಕ ಸುಹಾಸ್ ಜೊತೆಗೆ ತಗಾದೆ ಎತ್ತಿದ್ದು,  ಈ ವೇಳೆ ಸುಹಾಸ್ ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ನಡೆಸಿರುವುದಾಗಿ ಆರೋಪಿಸಿ ಜಯನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಇದರನ್ವಯ ಪೊಲೀಸರು ದೂರು ದಾಖಲಿಸಿಕೊಂಡಿದ್ದರು.

ಇದರ ಬೆನ್ನಲ್ಲೇ ಇದೀಗ  ಜಯನಗರ 3ನೇ ಬ್ಲಾಕ್ ​ನಲ್ಲಿ ಸ್ಕೂಟರ್​ನಿಂದ ಕೆಳಗೆ ಇಳಿದ ತಕ್ಷಣ ಶ್ರೇಯಾ, ಚಾಲಕ ಸುಹಾಸ್​ ಗೆ ಹೊಡೆಯುತ್ತಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಶ್ರೇಯಾ ಎರಡು ಬಾರಿ ಚಾಲಕನಿಗೆ ಹೊಡೆದಿದ್ದು, ಆದರೂ ಚಾಲಕ ತಾಳ್ಮೆಯಿಂದಿದ್ದ. ಆದರೆ ಮತ್ತೆ  ಹಲ್ಲೆ ನಡೆಸಲು ಮುಂದಾದಾಗ ಬೈಕ್ ಚಾಲಕ ಕಪಾಳಕ್ಕೆ ಬಿಗಿದಿದ್ದು, ಮಹಿಳೆ ಏಟಿನ ರಭಸಕ್ಕೆ ರಸ್ತೆಗೆ ಬಿದ್ದಿರುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿತ್ತು. ಇದೀಗ ಈ ಪ್ರಕರಣ ಮುಂದೇನಾಗಲಿದೆ ಎನ್ನುವ ಕುತೂಹಲ ಹೆಚ್ಚಾಗಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ