ರಾಸಲೀಲೆ ಸಿಡಿ ಬಿಡುಗಡೆ ಭೀತಿಯಲ್ಲಿ ರಮೇಶ್ ಜಾರಕಿಹೊಳಿ | ಸಾಹುಕಾರ್ ಮೇಲೆ ಕೆಲಸ ಕೊಡಿಸುವುದಾಗಿ ನಂಬಿಸಿ ಲೈಂಗಿಕ ಬಯಕೆ ತೀರಿಸಿಕೊಂಡ ಆರೋಪ - Mahanayaka
11:04 AM Saturday 23 - August 2025

ರಾಸಲೀಲೆ ಸಿಡಿ ಬಿಡುಗಡೆ ಭೀತಿಯಲ್ಲಿ ರಮೇಶ್ ಜಾರಕಿಹೊಳಿ | ಸಾಹುಕಾರ್ ಮೇಲೆ ಕೆಲಸ ಕೊಡಿಸುವುದಾಗಿ ನಂಬಿಸಿ ಲೈಂಗಿಕ ಬಯಕೆ ತೀರಿಸಿಕೊಂಡ ಆರೋಪ

02/03/2021


Provided by

ಬೆಂಗಳೂರು: ಸರ್ಕಾರಿ ಕೆಲಸ ನೀಡುವುದಾಗಿ ಯುವತಿಯನ್ನು ನಂಬಿಸಿ ಆಕೆಯನ್ನು ಸಚಿವ ರಮೇಶ್ ಜಾರಕಿಹೊಳಿ ಲೈಂಗಿಕವಾಗಿ ಬಳಸಿಕೊಂಡಿದ್ದು, ಇದರ ಸಿಡಿಯನ್ನು ಯುವತಿ ಮಾಡಿಕೊಂಡಿದ್ದು, ಇದೀಗ ಸಿಡಿ ಹೊರ ಬೀಳುವ ಭೀತಿಯಲ್ಲಿ ರಮೇಶ್ ಜಾರಕಿಹೊಳಿ ಇದ್ದಾರೆ.

ಯುವತಿಯ ಜೊತೆಗೆ ತನ್ನ ಆಸೆ ಪೂರೈಸಿಕೊಂಡ ಬಳಿಕ ಸಚಿವ ರಮೇಶ್ ಜಾರಕಿಹೊಳಿ ಕೆಲಸ ನೀಡಲು ನಿರಾಕರಿಸಿದ್ದಾರೆ. ಈ ವೇಳೆ ಯುವತಿ ತನ್ನ ಬಳಿ ಸಿಡಿ ಇದೆ ಎಂದು ಹೇಳಿದ್ದು, ಈ ವೇಳೆ ಯುವತಿಗೆ ಬೆದರಿಕೆ ಹಾಕಲಾಗಿದೆ ಎಂದು ವರದಿಯಾಗಿದೆ.

ರಮೇಶ್ ಜಾರಕಿಹೊಳಿ ಬೆದರಿಕೆಯಿಂದ ಕಂಗಾಲಾದ ಯುವತಿ ನಾಗರಿಕ ಹಕ್ಕು ಹೋರಾಟ ಸಮಿತಿಯ ದಿನೇಶ್ ಕಲ್ಲಹಳ್ಳಿ ಅವರನ್ನು ಸಂಪರ್ಕಿಸಿ ಮಾಹಿತಿ ನೀಡಿದ್ದಾರೆ. ಈ ಸಿಡಿ ಬಗ್ಗೆ ತನಿಖೆ ಕೈಗೊಂಡು, ಬೆದರಿಕೆ ಹಿನ್ನೆಲೆಯಲ್ಲಿ ಯುವತಿಗೆ ರಕ್ಷಣೆ ಒದಗಿಸಿ ಎಂದು ದಿನೇಶ್ ಕಲ್ಲಹಳ್ಳಿ ಮನವಿ ಮಾಡಿ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ.

ಮಾಹಿತಿಯ ಪ್ರಕಾರ ಕೆಪಿಟಿಸಿಎಲ್ ನಲ್ಲಿ ನೌಕರಿ ಕೊಡಿಸುವುದಾಗಿ ಯುವತಿಯನ್ನು ನಂಬಿಸಿದ್ದ ರಮೇಶ್ ಜಾರಕಿಹೊಳಿ ಹಲವು ಬಾರಿ ಯುವತಿಯನ್ನು ತನ್ನ ಲೈಂಗಿಕ ಬಯಕೆ ಪೂರೈಸಿಕೊಳ್ಳಲು ಬಳಕೆ ಮಾಡಿದ್ದಾರೆ ಎಂದು ಹೇಳಲಾಗಿದೆ.

whatsapp

 

ಇತ್ತೀಚಿನ ಸುದ್ದಿ