ರಾಷ್ಟ್ರಪತಿ ಭಾಷಣ ಬಹಿಷ್ಕರಿಸಲು 16 ವಿಪಕ್ಷಗಳ ನಿರ್ಧಾರ | ಕಾರಣ ಏನು ಗೊತ್ತಾ? - Mahanayaka
4:22 PM Saturday 31 - January 2026

ರಾಷ್ಟ್ರಪತಿ ಭಾಷಣ ಬಹಿಷ್ಕರಿಸಲು 16 ವಿಪಕ್ಷಗಳ ನಿರ್ಧಾರ | ಕಾರಣ ಏನು ಗೊತ್ತಾ?

28/01/2021

ನವದೆಹಲಿ: ಸಂಸತ್ ನಲ್ಲಿ ರಾಷ್ಟ್ರಪತಿ ಅವರ ಜಂಟಿ ಭಾಷಣದ ಕಲಾಪವನ್ನು ಬಹಿಷ್ಕರಿಸಲು 16 ವಿಪಕ್ಷಗಳು ನಿರ್ಧರಿಸಿದ್ದು, ಕೃಷಿ ಕಾಯ್ದೆ ವಿರೋಧಿಸಿ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ ಎಂದು ಕಾಂಗ್ರೆಸ್ ನಾಯಕ ಗುಲಾಂ ನಬಿ ಆಜಾದ್ ಹೇಳಿದ್ದಾರೆ.

ವಿವಾದಿತ ಕೃಷಿ ಕಾಯ್ದೆ ಮಾತ್ರವಲ್ಲದೇ,  ದೇಶದ ಆರ್ಥಿಕ ಸ್ಥಿತಿ,  ಭಾರತ ಮತ್ತು ಚೀನಾ ನಡುವಿನ ಸಂಘರ್ಷ ಮೊದಲಾದ ವಿಚಾರಗಳಿಗೆ ಸಂಬಂಧಿಸಿದಂತೆ 16 ವಿಪಕ್ಷಗಳು ರಾಷ್ಟ್ರಪತಿ ಭಾಷಣವನ್ನು ಬಹಿಷ್ಕರಿಸಲು ಮುಂದಾಗಿವೆ.

ಇದಕ್ಕೆ ಸಂಬಂಧಿಸಿದಂತೆ 16 ಪಕ್ಷಗಳ ನಾಯಕರ ಹೇಳಿಕೆಯ ಪಟ್ಟಿಯನ್ನು ಆಜಾದ್ ಬಿಡುಗಡೆಗೊಳಿಸಿದ್ದಾರೆ. ಶುಕ್ರವಾರದಿಂದ ಸಂಸತ್ ನ ಬಜೆಟ್ ಆರಂಭವಾಗಲಿದೆ. ಈ ಸಂದರ್ಭದಲ್ಲಿ ರಾಷ್ಟ್ರಪತಿ ಅವರು ಭಾಷಣ ಮಾಡಲಿದ್ದಾರೆ.

ಇತ್ತೀಚಿನ ಸುದ್ದಿ