ರಷ್ಯಾ ವಿರುದ್ಧ ಉಕ್ರೇನ್‌ ಅಂತಾರಾಷ್ಟ್ರೀಯ ಕೋರ್ಟ್‌ ಮೊರೆ - Mahanayaka
7:37 AM Thursday 16 - October 2025

ರಷ್ಯಾ ವಿರುದ್ಧ ಉಕ್ರೇನ್‌ ಅಂತಾರಾಷ್ಟ್ರೀಯ ಕೋರ್ಟ್‌ ಮೊರೆ

jalkin
28/02/2022

ಹೇಗ್: ರಷ್ಯಾ ಉಕ್ರೇನ್‌ ಮೇಲೆ ಯೋಜಿಸಿದ ನರಮೇಧ ಆಕ್ರಮಣ ಯೋಜನೆಯನ್ನು ತಡೆಯಬೇಕು. ಅಲ್ಲದೆ, ಈವರೆಗೂ ಆದ ಹಾನಿಯ ನಷ್ಟವನ್ನು ಭರಿಸುವಂತೆ ಆ ದೇಶಕ್ಕೆ ಸೂಚಿಸಬೇಕು ಎಂದು ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ಉಕ್ರೇನ್​, ರಷ್ಯಾ ವಿರುದ್ಧ ದೂರು ದಾಖಲಿಸಿದೆ.


Provided by

ಉಕ್ರೇನ್ ​ನ ಪೂರ್ವ ಪ್ರದೇಶಗಳಲ್ಲಿ ಯಾವುದೇ ಅಶಾಂತಿ ಉಂಟಾಗಿಲ್ಲ. ಈ ಪ್ರದೇಶದಲ್ಲಿ ಶಾಂತಿ ಸ್ಥಾಪನೆ ಹೆಸರಲ್ಲಿ ರಷ್ಯಾ ನಡೆಸುತ್ತಿರುವ ಮಿಲಿಟರಿ ಕಾರ್ಯಾಚರಣೆಯನ್ನು ಕೈಗೊಳ್ಳಲು ಆ ದೇಶಕ್ಕೆ ಯಾವುದೇ ಅಧಿಕಾರವಿಲ್ಲ. ತನ್ನ ದೇಶದ ಮೇಲೆ ಆಕ್ರಮಣ ಮಾಡುವುದೇ ಇದರ ಹಿಂದಿನ ಉದ್ದೇಶವಾಗಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದೆ.

ಫೆ. 24ರಿಂದ ನಡೆಸುತ್ತಿರುವ ಸೇನಾ ಕಾರ್ಯಾಚರಣೆಯನ್ನು ತಕ್ಷಣವೇ ನಿಲ್ಲಿಸುವಂತೆ ರಷ್ಯಾಗೆ ಆದೇಶಿಸಬೇಕು. ಪೂರ್ವ ಉಕ್ರೇನ್‌ನ ಲುಹಾನ್ಸ್ಕ್ ಮತ್ತು ಡೊನೆಟ್ಸ್ಕ್ ಪ್ರದೇಶಗಳಲ್ಲಿ ಶಾಂತಿ ಸ್ಥಾಪಿಸುವ ಸುಳ್ಳು ಮಾಹಿತಿ ನೀಡಿ ತನ್ನ ಮೇಲೆ ಆಕ್ರಮಣವನ್ನು ಪ್ರಾರಂಭಿಸಿದೆ.

ಈಗ ದೇಶದಲ್ಲಿ ನರಮೇಧವನ್ನು ನಡೆಸಲು ರಷ್ಯಾ ಯೋಜಿಸಿದೆ. ಇದನ್ನು ತಕ್ಷಣವೇ ನಿಲ್ಲಿಸಲು ಸೂಚಿಸಿ ಎಂದು ಐಸಿಜೆಗೆ ಸಲ್ಲಿಸಿದ ದೂರಿನಲ್ಲಿ ಉಕ್ರೇನ್‌ ಕೋರಿದೆ.ಉಕ್ರೇನ್​ ಸಲ್ಲಿಸಿದ ದೂರಿನ ಆಧಾರದ ಮೇಲೆ ಅಂತಾರಾಷ್ಟ್ರೀಯ ನ್ಯಾಯಾಲಯ ಶೀಘ್ರದಲ್ಲೇ ವಿಚಾರಣೆ ಕೈಗೆತ್ತಿಕೊಳ್ಳಲಿದೆ ಎನ್ನಲಾಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IrdQk252EnnGsLx9CS8tli

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ದೇಶ ರಕ್ಷಣೆಗೆ ಗನ್ ಹಿಡಿದ ಮಿಸ್ ಉಕ್ರೇನ್

70 ದಂಪತಿಗಳಿಗೆ ವಂಚಿಸಿದ ನಕಲಿ ವೈದ್ಯೆ: ಮಕ್ಕಳಾಗಲು ಔಷಧಿ ಪಡೆದ ಮಹಿಳೆ ಸ್ಥಿತಿ ಗಂಭೀರ

ನಟ ರವಿಚಂದ್ರನ್ ತಾಯಿ ನಿಧನ

ಇಂದು ಸಂಜೆ ದೆಹಲಿ ತಲುಪಲಿರುವ ಭಾರತೀಯರನ್ನು ಹೊತ್ತ 6ನೇ ವಿಮಾನ

ಚಿಕ್ಕಬಳ್ಳಾಪುರದಲ್ಲಿ ಭಾರೀ ಸ್ಫೋಟ: ಮನೆ ಸಂಪೂರ್ಣ ಛಿದ್ರ; ದಂಪತಿಗೆ ಗಂಭೀರ ಗಾಯ

 

ಇತ್ತೀಚಿನ ಸುದ್ದಿ