ರಷ್ಯಾದಿಂದ ಶೆಲ್‌ ದಾಳಿ; 70 ಉಕ್ರೇನ್‌ ಸೈನಿಕರ ಸಾವು - Mahanayaka
1:24 AM Wednesday 15 - October 2025

ರಷ್ಯಾದಿಂದ ಶೆಲ್‌ ದಾಳಿ; 70 ಉಕ್ರೇನ್‌ ಸೈನಿಕರ ಸಾವು

ukren army death
01/03/2022

ಕೀವ್‌: ರಷ್ಯಾದ ಪಡೆಗಳು ಉಕ್ರೇನ್‌ ಮೇಲೆ ಯುದ್ಧ ಮುಂದುವರಿಸಿದ್ದು, ಖಾರ್ಕೀವ್‌ ಮತ್ತು ಕೀವ್‌ ನಡುವಿನ ನಗರವಾದ ಓಖ್ಟಿರ್ಕಾದಲ್ಲಿ ರಷ್ಯಾದ ಶೆಲ್‌ ದಾಳಿಯಿಂದ 70ಕ್ಕೂ ಹೆಚ್ಚು ಉಕ್ರೇನ್‌ ಸೈನಿಕರು ಮೃತಪಟ್ಟಿದ್ದಾರೆ ಎಂದು ಓಖ್ಟಿರ್ಕಾ ನಗರದ ಮೂಲಗಳು ತಿಳಿಸಿವೆ.


Provided by

ಶೆಲ್‌ ದಾಳಿಯಿಂದಾಗಿ ವಸತಿ ಪ್ರದೇಶದ ಸಮೀಪದಲ್ಲಿ ರಷ್ಯಾ ಪಡೆಗಳು ಭಾರಿ ಹಾನಿ ಮಾಡಿವೆ. ನಿನ್ನೆ ನಡೆದಿದ್ದ ಸಂಧಾನ ಮಾತುಕತೆ ವಿಫಲವಾಗುತ್ತಿದ್ದಂತೆ ಉಕ್ರೇನ್‌ ರಾಜಧಾನಿ ಕೀವ್‌ ನಲ್ಲಿ 40 ಕಿ.ಮೀ. ಉದ್ದಕ್ಕೂ ಬೆಂಗಾವಲು ಪಡೆಗಳು, ನೂರಾರು ಟ್ಯಾಂಕ್‌ಗಳು ಹಾಗೂ ಇತರ ವಾಹನಗಳನ್ನು ನಿಯೋಜಿಸಲಾಗಿದ್ದು, ಮತ್ತಷ್ಟು ದಾಳಿಗೆ ಮುಂದಾಗಿವೆ.

ನಾಲ್ಕು ಅಂತಸ್ತಿನ ಕಟ್ಟಡದ ಸುಟ್ಟಿರುವ ಫೋಟೋಗಳನ್ನು ಜಾಲತಾಣಗಳಲ್ಲಿ ಪೋಸ್ಟ್ ಮಾಡಲಾಗಿದೆ. ಭಾನುವಾರ ನಡೆದಿದ್ದ ಹೋರಾಟದಲ್ಲಿ ಅನೇಕ ರಷ್ಯಾ ಸೈನಿಕರು ಮತ್ತು ಕೆಲವು ಸ್ಥಳೀಯ ನಿವಾಸಿಗಳು ಸಹ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IrdQk252EnnGsLx9CS8tli

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಮಲಗಿದ್ದಲ್ಲೇ ಯುವಕ ಅನುಮಾನಾಸ್ಪದ ಸಾವು

ರಾಷ್ಟ್ರಧ್ವಜಕ್ಕೆ ಅವಮಾನ: ಕಲ್ಲಡ್ಕ ಪ್ರಭಾಕರ್ ಭಟ್ ವಿರುದ್ಧ ದೂರು ದಾಖಲು

ರಷ್ಯಾ-ಉಕ್ರೇನ್ ಯುದ್ದ: ತನ್ನ ಸರ್ಕಾರದ ವಿರುದ್ದವೇ ಹರಿಹಾಯ್ದ ಬಿಜೆಪಿ ಸಂಸದ ವರುಣ್ ಗಾಂಧಿ

ನಾಪತ್ತೆಯಾಗಿದ್ದ ಬಾಲಕನ ಮೃತದೇಹ ನದಿಯಲ್ಲಿ ಪತ್ತೆ

ಕೆಂಪು ಕಲ್ಲಿನ ಅಟ್ಟಿ ಮಗುಚಿಬಿದ್ದು ಮಗು ಸಾವು

 

ಇತ್ತೀಚಿನ ಸುದ್ದಿ