ಕಲ್ಲುಗಳನ್ನು ಹೆಕ್ಕಿ ತಂದು ರಸ್ತೆಯ ಹೊಂಡ ಮುಚ್ಚಿದ ವಿದ್ಯಾರ್ಥಿ - Mahanayaka
8:45 AM Thursday 16 - October 2025

ಕಲ್ಲುಗಳನ್ನು ಹೆಕ್ಕಿ ತಂದು ರಸ್ತೆಯ ಹೊಂಡ ಮುಚ್ಚಿದ ವಿದ್ಯಾರ್ಥಿ

mangalore
19/08/2022

ಮಂಗಳೂರು: ನಗರದ ಕಂಕನಾಡಿ ಹೂವಿನ ಮಾರುಕಟ್ಟೆ ಬಳಿ ಕಾಂಕ್ರಿಟ್ ರಸ್ತೆಯಂಚಿನಲ್ಲಿ ಹೊಂಡ ಕಾಣಿಸಿಕೊಂಡಿದೆ. ಈ ಹೊಂಡಕ್ಕೆ ದ್ವಿಚಕ್ರ ವಾಹನ ಸವಾರರು ಬೀಳುತ್ತಿದ್ದರೆ, ಪಾದಚಾರಿಗಳ ಕಾಲು ಸಿಲುಕುತ್ತಿದೆ.


Provided by

ಈ ಹೊಂಡದಿಂದಾಗಿ ಜನರು ತೊಂದರೆಗೀಡಾಗುತ್ತಿರುವುದನ್ನು ದಿನನಿತ್ಯ ಗಮನಿಸುತ್ತಿರುವ ವಿದ್ಯಾರ್ಥಿಯೊಬ್ಬ ಪಕ್ಕದಿಂದ ಸಣ್ಣ ಕಲ್ಲುಗಳನ್ನು ಹೆಕ್ಕಿ ತಂದು ಹೊಂಡ ಮುಚ್ಚುವ ಪ್ರಯತ್ನ ಮಾಡಿದ್ದಾನೆ.

ಈ ಬಗ್ಗೆ ಮಾತನಾಡಿದ ವಿದ್ಯಾರ್ಥಿ, ರಸ್ತೆಯ ಹೊಂಡದಲ್ಲಿ ಬೈಕ್‌ ಗಳು ನಿಯಂತ್ರಣ ತಪ್ಪಿ ಬೀಳುತ್ತಿವೆ. ಅದನ್ನು ತಡೆಯಲು ಪಕ್ಕದಿಂದ ಸಣ್ಣ ಕಲ್ಲುಗಳನ್ನು ಹೆಕ್ಕಿ ತಂದು ಹೊಂಡ ಮುಚ್ಚುವ ಪ್ರಯತ್ನ ಮಾಡುತ್ತಿದ್ದೇನೆ ಎಂದಿದ್ದಾನೆ.

ಮಂಗಳೂರಿನಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿಯಿಂದಾಗಿ ನಗರದಾದ್ಯಂತ ರಸ್ತೆ ಅವ್ಯವಸ್ಥೆಗಳು ಅಲ್ಲಿ ಕಂಡು ಬರುತ್ತಿವೆ. ಈಗಾಗಾಲೇ ನಿರ್ಮಿಸಲಾಗಿರುವ ರಸ್ತೆಗಳನ್ನು ಮತ್ತೆ ಅಗೆದು ಹೊಸ ಕಾಮಗಾರಿಗಳನ್ನು ಆರಂಭಿಸುತ್ತಿರುವುದಕ್ಕೂ ವ್ಯಾಪಕ ಆಕ್ರೋಶಗಳು ಕೇಳಿ ಬಂದಿವೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ginhq56yzxz2MmHFl94DFN

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ