ರಸ್ತೆ ಮಧ್ಯೆಯೇ ಆನೆಗೆ ಹೆರಿಗೆ: ತಾಯಿ, ಮರಿಯ ರಕ್ಷಣೆಗೆ ಕಾವಲು ನಿಂತ ಆನೆ ಹಿಂಡು! - Mahanayaka

ರಸ್ತೆ ಮಧ್ಯೆಯೇ ಆನೆಗೆ ಹೆರಿಗೆ: ತಾಯಿ, ಮರಿಯ ರಕ್ಷಣೆಗೆ ಕಾವಲು ನಿಂತ ಆನೆ ಹಿಂಡು!

tiruvananthapuram
07/07/2022

ತಿರುವನಂತಪುರಂ: ಕೇರಳ ಮತ್ತು ತಮಿಳುನಾಡನ್ನು ಸಂಪರ್ಕಿಸುವ ರಸ್ತೆಯಲ್ಲಿ ಆನೆಯೊಂದು ರಸ್ತೆ ಮಧ್ಯದಲ್ಲೇ ಮರಿಗೆ ಜನ್ಮವಿತ್ತಿರುವ ಘಟನೆ ನಿನ್ನೆ ರಾತ್ರಿ ನಡೆದಿದೆ.

ಇದರಿಂದಾಗಿ ಈ ರಸ್ತೆಯಲ್ಲಿ ವಾಹನ ದಟ್ಟಣೆ ಉಂಟಾಗಿದ್ದು, ಕೇರಳ ಮತ್ತು ತಮಿಳುನಾಡಿಗೆ ತೆರಳುವ ಪ್ರಯಾಣಿಕರು 1 ಗಂಟೆಯ ಕಾಲ ಪರದಾಡುವ ಪರಿಸ್ಥಿತಿ ಆಗಿತ್ತು.

ಹಿಂಡಿನೊಂದಿಗೆ ಬರುತ್ತಿದ್ದ ಆನೆಗೆ ರಸ್ತೆಯ ಮಧ್ಯಕ್ಕೆ ಬರುವಷ್ಟರಲ್ಲೇ ಹೆರಿಗೆಯಾಗಿದೆ. ತಕ್ಷಣ ಆನೆಗೆ ಆನೆಯ ಹಿಂಡು ರಕ್ಷಣೆ ನೀಡುತ್ತಾ ನಿಂತಿತ್ತು,

ಒಂದು ಗಂಟೆಯ ನಂತರ ತಾಯಿ ಆನೆಯು ಮರಿಯನ್ನುಕರೆದುಕೊಂಡು ಕಾಡೊಳಗೆ ಹೋದ ನಂತರವೇ ಆನೆ ಹಿಂಡು ಕಾಡೊಳಗೆ ನಡೆದಿದ್ದು, ವಾಹನ ಸಂಚಾರಕ್ಕೆ ಅವಕಾಶ ಸಿಕ್ಕಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IaxQSuNxGHREVEoloSpDOO

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ