ಕಾಂತಾರ ಚಿತ್ರ ನೋಡಿದಂತೆಯೇ, ರಸ್ತೆ ಗುಂಡಿ ನೋಡಲು ಅಧಿಕಾರಿಗಳನ್ನು ಕರೆದೊಯ್ಯಿರಿ: ರಘುಪತಿ ಭಟ್, ಕೋಟಗೆ ಹರೀಶ್ ಕಿಣಿ ಆಗ್ರಹ - Mahanayaka
7:23 PM Sunday 14 - September 2025

ಕಾಂತಾರ ಚಿತ್ರ ನೋಡಿದಂತೆಯೇ, ರಸ್ತೆ ಗುಂಡಿ ನೋಡಲು ಅಧಿಕಾರಿಗಳನ್ನು ಕರೆದೊಯ್ಯಿರಿ: ರಘುಪತಿ ಭಟ್, ಕೋಟಗೆ ಹರೀಶ್ ಕಿಣಿ ಆಗ್ರಹ

kanthara
28/10/2022

ಉಡುಪಿ: ವಿದ್ಯಾರ್ಥಿಗಳನ್ನು ಮತ್ತು ದೈವದ‌ ಚಾಕ್ರಿದಾರರನ್ನು  ಇತ್ತೀಚೆಗೆ ಉಡುಪಿ ಶಾಸಕ ರಘುಪತಿ ಭಟ್ ಮತ್ತು ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ ಅವರು ತಮ್ಮ ಕೆಲಸದ ಒತ್ತಡದ ನಡುವೆಯೂ ಚಲನಚಿತ್ರ ವೀಕ್ಷಣೆಗೆ ಕರೆದುಕೊಂಡು ಹೋಗಿದ್ದಾರೆ. ಅದೇ ರೀತಿ ಉಡುಪಿ ಜಿಲ್ಲೆಯ ರಸ್ತೆಗುಂಡಿಗಳ ವೀಕ್ಷಣೆಗೆ ಲೋಕೋಪಯೋಗಿ, ಜಿ.ಪಂ. ಹಾಗೂ ನಗರಸಭೆಯ ಇಂಜಿನಿಯರುಗಳು ಮತ್ತು ಅಧಿಕಾರಿಗಳನ್ನು ಕರೆ ತರುವಂತೆ ಕೆಪಿಸಿಸಿ ಕೋ- ಆರ್ಡಿನೇಟರ್ ಅಲೆವೂರು ಹರೀಶ್ ಕಿಣಿ ಆಗ್ರಹಿಸಿದ್ದಾರೆ.


Provided by

ಉಡುಪಿ ಜಿಲ್ಲೆಯಲ್ಲಿ ಪಿಡಬ್ಲ್ಯೂಡಿ, ಜಿ.ಪಂ, ಪುರಸಭೆ, ನಗರಸಭೆ, ಫಿಶರೀಸ್ ರಸ್ತೆಗಳೆಲ್ಲವೂ ತೀರಾ ಹದಗೆಟ್ಟಿದ್ದು, ನಿತ್ಯ ಸಂಚಾರಿಗಳಿಗೆ, ಆಟೊರಿಕ್ಷಾ ಚಾಲಕ-ಮಾಲಕರಿಗೆ, ದ್ವಿಚಕ್ರ ಸವಾರರಿಗೆ ತೊಂದರೆಯಾಗಿದೆ. ಈ ಬಗ್ಗೆ ಸಾಮಾಜಿಕ ಚಿಂತಕರು, ಸಾರ್ವಜನಿಕರು ಹಲವಾರು ಬಾರಿ ಸಾಮಾಜಿಕ ಜಾಲತಾಣ, ಪತ್ರ ಮುಖೇನ, ಪ್ರತಿಭಟನೆಗಳ ಮೂಲಕ ಮನವಿ ಮಾಡಿದ್ದರೂ,  ಅಧಿಕಾರಿಗಳಿಗಳು, ಜನಪ್ರತಿನಿಧಿಗಳು ಯಾವುದೇ ರೀತಿ ಸ್ಪಂದಿಸದೆ ಮೌನವ್ರತ ವಹಿಸಿದ್ದಾರೆ ಎಂದರು.

ಚಲನಚಿತ್ರ ವೀಕ್ಷಣೆಗೆ ಸಮಯ ಹೊಂದಿಸುವ ಜನಪ್ರತಿನಿಧಿಗಳು ರಸ್ತೆಗುಂಡಿಗಳ ಪರಿಶೀಲನೆಗೂ ಸಮಯ ಮಾಡಿಕೊಂಡು ಅಧಿಕಾರಿಗಳೊಂದಿಗೆ ಆಗಮಿಸಿ ರಸ್ತೆ ದುರಸ್ಥಿಗೆ ಕ್ರಮ ಕೈಗೊಳ್ಳುವಂತೆ ಹರೀಶ ಕಿಣಿ ಆಗ್ರಹಿಸಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/GoQnwP3qNkmAbAPcjb8n8F

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ