ರಸ್ತೆಯ ಗುಂಡಿಗೆ ರೈತನ ಪ್ರಾಣ ಬಲಿ | ಆಕ್ರೋಶಿತ ಸ್ಥಳೀಯರಿಂದ ಪ್ರತಿಭಟನೆ - Mahanayaka
9:18 AM Wednesday 20 - August 2025

ರಸ್ತೆಯ ಗುಂಡಿಗೆ ರೈತನ ಪ್ರಾಣ ಬಲಿ | ಆಕ್ರೋಶಿತ ಸ್ಥಳೀಯರಿಂದ ಪ್ರತಿಭಟನೆ

road
27/11/2021


Provided by

ಚಿಕ್ಕಬಳ್ಳಾಪುರ: ರೈತರೊಬ್ಬರು ಟ್ರ್ಯಾಕ್ಟರ್ ಅಡಿಗೆ ಸಿಲು ಸಾವನ್ನಪ್ಪಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಕುದುಪಕುಂಟೆ ಗ್ರಾಮದ ಬಳಿಯಲ್ಲಿ ನಡೆದಿದ್ದು,  ಈ ಅಪಘಾತದ ಬೆನ್ನಲ್ಲೇ ರಸ್ತೆ ಅವ್ಯವಸ್ಥೆಯ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ಶಿಡ್ಲಘಟ್ಟ ತಾಲೂಖಿನ ಯರ್ಯಹಳ್ಳಿ ಗ್ರಾಮದ ನಿವಾಸಿಯಾಗಿರುವ ರೈತ ಮುನಿಸ್ವಾಮಿ ಎಂಬವರು ಬೈಕ್ ನಲ್ಲಿ ಹಿಂಬದಿ ಸವಾರರಾಗಿ ಪ್ರಯಾಣಿಸುತ್ತಿದ್ದರು. ರಸ್ತೆಯ ಗುಂಡಿಗೆ ಬಿದ್ದ ಬೈಕ್ ಜಂಪ್ ಆದ ವೇಳೆ ಬೈಕ್ ನಿಂದ ಎಸೆಯಲ್ಟ ಅವರು ಹಿಂದಿನಿಂದ ಬರುತ್ತಿದ್ದ ಟ್ರ್ಯಾಕ್ಟರ್ ನಡಿಗೆ ಬಿದ್ದಿದ್ದು, ಈ ವೇಳೆ ಟ್ರ್ಯಾಕ್ಟರ್ ನ ಚಕ್ರ ಹರಿದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಇನ್ನೂ ಘಟನೆ ನಡೆದ ಬಳಿಕ ಆಕ್ರೋಶ ವ್ಯಕ್ತಪಡಿಸಿದ ಇಲ್ಲಿನ ಸ್ಥಳೀಯರು ರಸ್ತೆ ಅವ್ಯವಸ್ಥೆಯನ್ನು ಖಂಡಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಘಟನೆ ಸಂಬಂಧ ದಿಬ್ಬೂರಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ginhq56yzxz2MmHFl94DFN

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಬೆಲೆ ಹೆಚ್ಚಿಸಿ ಶಾಕ್ ನೀಡಿದ್ದ ಏರ್ಟೆಲ್ ಈಗ ನೀಡಿರುವ ಆಫರ್ ಏನು ಗೊತ್ತಾ?

ಒಂದೇ ದಿನದಲ್ಲಿ ಫೇಮಸ್ ಆದ ‘ಗುಟ್ಕಾ ಮ್ಯಾನ್’ ಗೆ ಶುರುವಾಯ್ತು ತಲೆನೋವು! | ಪಕ್ಕದಲ್ಲಿದ್ದ ಹುಡುಗಿ ಯಾರು ಗೊತ್ತಾ?

ಶಾಸಕರಿಗೇ ಅಸ್ಪೃಶ್ಯತೆ ಅನುಭವವಾಯ್ತಾ? | ಪಲ್ಲಕ್ಕಿ ಹೊತ್ತ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅವರಿಗೆ ಕೆಟ್ಟ ಅನುಭವ!

ಬಾಲಕನ ಮೇಲೆ ದಾಳಿ ನಡೆಸಿದ 7 ಬೀದಿ ನಾಯಿಗಳು

ಬುಡಕಟ್ಟು ಸಮುದಾಯದ 3 ಶಿಶುಗಳ ನಿಗೂಢ ಸಾವು!

ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಲು ಪೇಜಾವರ ಶ್ರೀ ನಿರಾಕರಿಸಿದ್ದರು | ಜ್ಞಾನಪ್ರಕಾಶ ಸ್ವಾಮೀಜಿ

ಇತ್ತೀಚಿನ ಸುದ್ದಿ