ಪುಸ್ತಕ ಓದಿ ಟೆಲಿಸ್ಕೋಪ್ ತಯಾರಿಸಿದ ಯುವಕ: ನಿತ್ಯ ಗ್ರಹ, ನಕ್ಷತ್ರ ದರ್ಶನ - Mahanayaka

ಪುಸ್ತಕ ಓದಿ ಟೆಲಿಸ್ಕೋಪ್ ತಯಾರಿಸಿದ ಯುವಕ: ನಿತ್ಯ ಗ್ರಹ, ನಕ್ಷತ್ರ ದರ್ಶನ

bharath
29/06/2023


Provided by

ಚಾಮರಾಜನಗರ: ಅತೀವ ಆಸಕ್ತಿ, ಶ್ರದ್ಧೆ ಇದ್ದರೇ ಏನು ಬೇಕಾದರೂ ಸಾಧಿಸಬಹುದು ಎಂಬುದಕ್ಕೆ ಈ ಖಗೋಲ ಪ್ರೇಮಿ ಯುವಕನೇ ನಿದರ್ಶನ. ಪುಸ್ತಕ ಸಹಾಯದಿಂದ ಸ್ವತಃ ಟೆಲಿಸ್ಕೋಪ್ ನ್ನು ತಯಾರಿಸಿ ಖಗೋಲ ವೀಕ್ಷಣೆ ಮಾಡುತ್ತಿದ್ದಾರೆ.

ಹೌದು…, ಚಾಮರಾಜನಗರದ ಡಿಪ್ಲೊಮ ಪದವೀಧರ ಭರತ್(29 ವರ್ಷ)  ಎಂಬವರು ದುಬಾರಿ ಟೆಲಿಸ್ಕೋಪ್ ಕೊಳ್ಳಲು ಆರ್ಥಿಕ ಶಕ್ತಿ ಇಲ್ಲದ ಕಾರಣ ಸ್ವತಃ ದೂರದರ್ಶಕ  ತಯಾರು ಮಾಡಿದ್ದು ನಿತ್ಯ ಖಗೋಲ ವೀಕ್ಷಣೆ ಮಾಡುವ ಮೂಲಕ ತಮ್ಮ ವಿಜ್ಞಾನಾಸಕ್ತಿಯನ್ನು ತಣಿಸಿಕೊಳ್ಳುತ್ತಿದ್ದಾರೆ.

ವಿಜ್ಞಾನಿ ಪಿ.ಎನ್‌.ಶಂಕರ್ ಬರೆದಿರುವ ” ಹೌ ಟು ಬಿಲ್ಡ್ ಟೆಲಿಸ್ಕೋಪ್ ” ಎಂಬ ಪುಸ್ತಕ ಓದಿಕೊಂಡು ಜೊತೆಗೆ ಫೋನ್ ಕರೆಗಳ ಮೂಲಕ ಹಲವರಿಂದ ಸಲಹೆ ಪಡೆದು ಮೊದಲ ಪ್ರಯತ್ನದಲ್ಲೇ ಟೆಲಿಸ್ಕೋಪ್ ತಯಾರಿಸಿದ್ದಾರೆ. ಇವರು ತಯಾರಿಸುವ ಟೆಲಿಸ್ಕೋಪ್ 8 ಇಂಚು ವ್ಯಾಸದ ನಿಮ್ನ ದರ್ಪಣ ಹೊಂದಿದ್ದು 8.1 ಪೋಕಲ್ ಅನುಪಾತದ 1660 ಮಿ.ಮೀ. ಪೋಕಲ್ ಲೆಂತ್ ಹೊಂದಿದ್ದು, ಇಷ್ಟು ದೊಡ್ಡ ದೂರದರ್ಶಕವನ್ನು ಖರೀದಿ ಮಾಡಲು 70-80 ಸಾವಿರ ಬೇಕಾಗಲಿದೆ. ಆದರೆ, ಸ್ವತಃ ಭರತ್ ಅವರೇ ಟೆಲಿಸ್ಕೋಪ್ ಕಿಟ್ ಸಹಾಯದಿಂದ ಸ್ಥಳೀಯವಾಗಿ ಸಿಗುವ ವಸ್ತುಗಳನ್ನು ಬಳಸಿಕೊಂಡು ಅಂದಾಜು 20 ಸಾವಿರ ರೂ. ಖರ್ಚು ಮಾಡಿ ದೂರದರ್ಶಕ ತಯಾರಿ ಮಾಡಿದ್ದಾರೆ.

ಏನೇನೂ ನೋಡುತ್ತಿದ್ದಾರೆ ಭರತ್..?

ಟೆಲಿಸ್ಕೋಪ್ ಮೂಲಕ ಸೌರಮಂಡಲದ ಎಲ್ಲಾ ಗ್ರಹಗಳು, ಉಪ ಗ್ರಹಗಳು, ಚಂದ್ರ ಗ್ರಹಣಗಳನ್ನು ಭರತ್ ಕಣ್ತುಂಬಿಕೊಂಡಿದ್ದಾರೆ. ಜೊತೆಗೆ,  ಅಕ್ಕಪಕ್ಕದ ಮನೆಗಳ ಮಕ್ಕಳಿಗೆ, ತಮ್ಮ ಮನೆಯವರಿಗೂ ಗ್ರಹಗಳ ದರ್ಶನ ಮಾಡಿಸಿದ್ದಾರೆ.

ಸೌರಮಂಡಲದ ಅತಿ ದೊಡ್ಡ ಗ್ರಹ ಗುರು, ಶನಿ ಗ್ರಹದ ಸುತ್ತಲಿನ ಉಂಗುರ, ನಕ್ಷತ್ರ ಪುಂಜಗಳು, ಚಂದ್ರ ಹೀಗೆ ಖಗೋಲದ ವೀಕ್ಷಣೆಗೆ ಭರತ್ ಅವರ ಮನೆಯೇ ಪ್ರಯೋಗಾಲಯವಾಗಿದೆ. 8 ನೇ ತರಗತಿಯಲ್ಲಿ ಅಬ್ದುಲ್ ಕಲಾಂ ಅವರು ಸುತ್ತೂರಿಗೆ ಭೇಟಿ ನೀಡಿದ್ದ ವೇಳೆ ಸಣ್ಣದೊಂದು ಟೆಲಿಸ್ಕೋಪ್ ತಯಾರಿಸಿ ಪ್ರದರ್ಶನವನ್ನು ಮಾಡಿದ್ದರು ಭರತ್.

50 ತಾಸು ತೆಗೆದುಕೊಂಡಿರುವ ಭರತ್:

ಕೋವಿಡ್ ಎರಡನೇ ಅಲೆಯ ಸಮಯವನ್ನು ಭರತ್ ಸದುಪಯೋಗ ಮಾಡಿಕೊಂಡಿದ್ದು ತಾಳ್ಮೆ, ಪರಿಶ್ರಮದ ಮೂಲಕ ಈ ಟೆಲಿಸ್ಕೋಪ್ ತಯಾರಿಸಿದ್ದಾರೆ.  ದೂರದರ್ಶನದ ಪ್ರಮುಖ ಭಾಗವಾದ ಪ್ರೈಮರಿ ಮಿರರ್ ಗಾಜನ್ನು ಉಜ್ಜಿ ತಯಾರು ಮಾಡಬೇಕಿದ್ದು ಪರಿಣತರು ಮಾಡುವ ಕೆಲಸವನ್ನು ಭರತ್ ಶ್ರದ್ಧೆ ವಹಿಸಿ ತಾವೇ ಮಾಡಿದ್ದಾರೆ.

ಹೌ ಟು ಬಿಲ್ಡ್ ಟೆಲಿಸ್ಕೋಪ್ ಎಂಬ ಪುಸ್ತಕ ಓದಿಕೊಂಡು ಅಮೆಚೂರ್ ಟೆಲಿಸ್ಕೋಪ್ ಮೇಕರ್ಸ್ ಎಂಬ ಫೇಸ್ ಬುಕ್ ಪೇಜಿನ ಕೆಲ ಪರಿಣತರ ಸಲಹೆ ಪಡೆದು ದೂರವಾಣಿ ಮೂಲಕ ಮಾರ್ಗದರ್ಶನ ಪಡೆದು  ಈ ದೂರದರ್ಶಕ ರೆಡಿ ಮಾಡಿದ್ದೇನೆ, ಮೊದಲ ಪ್ರಯತ್ನದಲ್ಲೇ ಟೆಲಿಸ್ಕೋಪ್ ಪೂರ್ಣಪ್ರಮಾಣದಲ್ಲಿ ಸಮರ್ಪಕವಾಗಿ ಬಂದಿದ್ದು ಖುಷಿ ತಂದಿದೆ ಎಂದು ಸಂತಸ ಹಂಚಿಕೊಳ್ಳುತ್ತಾರೆ ಭರತ್.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ