ರಾಜ್ಯದಲ್ಲಿ ವಿದ್ಯುತ್ ಆಗಾಗ ಕೈ ಕೊಡಲು ಇದೇ ಕಾರಣವಂತೆ!

ಚಿಕ್ಕಮಗಳೂರು: ರಾಜ್ಯದಲ್ಲಿ ಲೋಡ್ ಶೆಡ್ಡಿಂಗ್ ಕುರಿತು ಇಂಧನ ಸಚಿವ ಜಾರ್ಜ್ ಚಿಕ್ಕಮಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದರು.
ನಮಗೆ ಆರಂಭದಲ್ಲಿ ಮಳೆ ಸ್ವಲ್ಪ ಕಡಿಮೆ ಆಯ್ತು, ಮಳೆಗಾಲದಲ್ಲಿ ಥರ್ಮಲ್ ಪ್ಲಾಂಟ್ ಗಳು ಸರ್ವೀಸ್ ಮಾಡ್ತಾರೆ, ಮಳೆಗಾಲದಲ್ಲಿ ಥರ್ಮಲ್ ಪ್ಲಾಂಟ್ ಪವರ್ ಜನರೇಟ್ ಮಾಡೋದು ಕಡಿಮೆ ಆಯ್ತು, ಈಗ ಥರ್ಮಲ್ ಪ್ಲಾಂಟ್ ಜಾಸ್ತಿ ಮಾಡಲು ಆದೇಶ ಮಾಡಿದ್ದೇವೆ ಎಂದು ತಿಳಿಸಿದ್ರು.
10 ದಿನದಲ್ಲಿ ಸರ್ವೀಸ್ ಮಾಡೋದನ್ನ ನಿಲ್ಲಿಸುತ್ತಾರೆ. ನಮ್ಮ ಕಲ್ಲಿದ್ದಲು ಕ್ವಾಲಿಟಿ ಅಷ್ಟು ಸಾಕಾಗಲ್ಲ, ಆಮದು ಮಾಡಿಕೊಂಡ ಕೋಲ್ ಜೊತೆ ಮಿಕ್ಸ್ ಮಾಡಬೇಕು, ಮಹಾರಾಷ್ಟ್ರದ ಮಳೆಯಿಂದ ರೈಲಿನಲ್ಲಿ ಬರುವಾಗ ಕೋಲ್ ವೆಟ್ ಆಗಿದೆ, ವಿ ಆರ್ ಲಕ್ಕಿ, ಕರ್ನಾಟಕದಲ್ಲಿ ಸೋಲಾರ್ ಹೆಚ್ಚು ಬಳಸುತ್ತಾರೆ ಎಂದು ತಿಳಿಸಿದರು.
4 ದಿನ ಸೌಥ್ ಇಂಡಿಯಾದಲ್ಲಿ ಗಾಳಿ ಬರಲಿಲ್ಲ, ಆಗಲೂ ಉತ್ಪಾದನೆ ಕಡಿಮೆ ಆಯ್ತು, ನಿನ್ನೆ-ಮೊನ್ನೆಯಿಂದ ಪಿಕ್ ಅಪ್ ಆಗ್ತಿದೆ, ಸೋಲಾರ್ ಸಬ್ ಸ್ಟೇಷನ್ ನಲ್ಲಿ ಸೋಲಾರ್ ಉತ್ಪಾದನೆ ಮಾಡುತ್ತೇವೆ, 10-20-30 ಎಕರೆ ಮಾಡಿ ರಾಜ್ಯಾದ್ಯಂತ ಸೋಲಾರ್ ಉತ್ಪಾದನೆಯನ್ನ ಸಬ್ ಸ್ಟೇಷನ್ಗೆ ಕೊಡುತ್ತವೆ ಎಂದರು.