‘ಸ್ವಲ್ಪ ಹೊತ್ತು ಕಾಯಿರಿ’ ಎಂದ ರಿಸೆಪ್ಷನಿಸ್ಟ್: ಒದ್ದು ಕೂದಲು ಹಿಡಿದು ಎಳೆದಾಡಿದ ರೋಗಿ

ಥಾಣೆ: ಸ್ವಲ್ಪ ಹೊತ್ತು ಕಾಯಿರಿ ಎಂದಿದ್ದಕ್ಕೆ ಆಸ್ಪತ್ರೆಯ ಮಹಿಳಾ ರಿಸೆಪ್ಷನಿಸ್ಟ್ ವೊಬ್ಬರ ಮೇಲೆ ವ್ಯಕ್ತಿಯೊಬ್ಬ ಸಾರ್ವಜನಿಕರ ಎದುರೇ ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಮಹಾರಾಷ್ಟ್ರದ ಥಾಣೆಯಲ್ಲಿರುವ ಖಾಸಗಿ ಕ್ಲಿನಿಕ್ ನಡೆದಿದೆ.
26 ವರ್ಷದ ರಿಸೆಪ್ಷನಿಸ್ಟ್ ಹಲ್ಲೆಗೊಳಗಾದವರಾಗಿದ್ದಾರೆ. ಅಪಾಯಿಂಟ್ ಮೆಂಟ್ ಇಲ್ಲದೆ ವ್ಯಕ್ತಿ ವೈದ್ಯರ ಕೊಠಡಿಗೆ ಪ್ರವೇಶಿಸಲು ಯತ್ನಿಸಿದ ವೇಳೆ, ಮಹಿಳಾ ರಿಸೆಪ್ಷನಿಸ್ಟ್ ವಿನಮ್ರತೆಯಿಂದ ಪ್ರವೇಶ ನಿರಾಕರಿಸಿದ ವೇಳೆ, ಅವಾಚ್ಯ ಶಬ್ದಗಳಿಂದ ನಿಂದಿಸಿದ ವ್ಯಕ್ತಿ, ರಿಸೆಪ್ಷನಿಸ್ಟ್ ಗೆ ಒದ್ದು, ಕೂದಲಿನಲ್ಲಿ ಹಿಡಿದು ದರದರನೇ ಎಳೆದೊಯ್ದಿದ್ದಾನೆ. ಈ ವೇಳೆ ಅಲ್ಲಿದ್ದ ಇತರ ಸಿಬ್ಬಂದಿ, ಸಾರ್ವಜನಿಕರು ಮಹಿಳಾ ರಿಸೆಪ್ಷನಿಸ್ಟ್ ನ್ನು ಆತನಿಂದ ಬಿಡಿಸಿ ರಕ್ಷಿಸಿದ್ದಾರೆ.
ಸಂತ್ರಸ್ಥೆ ನೀಡಿದ ದೂರಿನ ಆಧಾರದಲ್ಲಿ ಆರೋಪಿಯ ವಿರುದ್ಧ ವಿವಿಧ ಅಪರಾಧ ಪ್ರಕರಣಗಳಡಿಯಲ್ಲಿ ದೂರು ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ. ಘಟನೆಯ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ವರದಿಗಳ ಪ್ರಕಾರ, ಆರೋಪಿಯನ್ನು ಗೋಕುಲ್ ಝಾ ಎಂದು ಹೆಸರಿಸಲಾಗಿದ್ದು, ಈತ ಕೃತ್ಯ ನಡೆಸುವ ವೇಳೆ ಮದ್ಯಪಾನ ಮಾಡಿದ್ದ ಎನ್ನಲಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಹಾಯಕ ಪೊಲೀಸ್ ಆಯುಕ್ತ ಸುಹಾಸ್ ಹೇಮಾಡೆ, ನಾವು ಆರೋಪಿಯನ್ನು ಹುಡುಕುತ್ತಿದ್ದೇವೆ ಮತ್ತು ಅವನ ಬಂಧನದ ನಂತರ ವಿವರಗಳು ಹೊರಬರುತ್ತವೆ ಎಂದು ತಿಳಿಸಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD